NationalPolitics

ಆಂಧ್ರದಲ್ಲಿ ಟಿಡಿಪಿ ಜೊತೆ ಜನಸೇನಾ ಮೈತ್ರಿ; ಪವನ್‌ ಕಲ್ಯಾಣ್‌ ಅಧಿಕೃತ ಘೋಷಣೆ

ಅಮರಾವತಿ (ಆಂಧ್ರ ಪ್ರದೇಶ); ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿ ರಾಜಮಂಡ್ರಿ ಜೈಲಿನಲ್ಲಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್‌ ಕಲ್ಯಾಣ್‌ ಇಂದು ಭೇಟಿ ಮಾಡಿದ್ದರು. ಅನಂತರ ಮಾತನಾಡಿರುವ ಅವರು ಮುಂದಿನ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅದನ್ನು ಕೊನೆಗಾಣಿಸಬೇಕಾದರೆ ನಾವಿಬ್ಬರೂ ಒಂದಾಗಲೇ ಬೇಕಿದೆ. ಹೀಗಾಗಿ, ಟಿಡಿಪಿ ಜೊತೆ ಈ ಬಾರಿ ಚುನಾವಣೆ ಎದುರಿಸುತ್ತೇವೆ ಎಂದು ಅವರು ಹೇಳಿದ್ದಾರೆ.  ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಆಡಳಿತ ಚೆನ್ನಾಗಿ ನಡೆಸಿದ್ದಿದ್ದರೆ, ಬಾಲಕೃಷ್ಣ, ಲೋಕೇಶ್ ಹಾಗೂ ನಾನು ರಾಜಕೀಯವಾಗಿ ಭೇಟಿಯಾಗೋ ಅವಶ್ಯಕತೆಯೇ ಬರುತ್ತಿರಲಿಲ್ಲ.  ಚಂದ್ರಬಾಬು ಬಂಧನ ರಾಜಕೀಯ ಸೇಡಿನಿಂದ ಮಾಡಿದ್ದು ಎಂದು ಪವನ್‌ ಕಲ್ಯಾಣ್‌ ಕಿಡಿ ಕಾರಿದ್ದಾರೆ.

 

Share Post