ಹೆಂಡತಿ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಆರೋಪಿಗೆ ಶಿಕ್ಷೆ
ಬೆಂಗಳೂರು; ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನದಿಂದ ಪತ್ನಿಯನ್ನೆ ಕೊಲೆಮಾಡಿ ಸಾಕ್ಷ್ಯ ನಾಶ ಮಾಡಿದ್ದ ಆರೋಪಿಗೆ ನ್ಯಾಯಾಲಯ 07 ವರ್ಷಗಳ ಸಜೆ ಮತ್ತು ತಲಾ 1000/-ರೂ ದಂಡ ವಿಧಿಸಿದೆ.
ಆರೋಪಿಯಾದ ಕೈಲಾಶ್ ಚಂದ್ ಬೆಹರ್ ಸುಮಾರು 06 ವರ್ಷಗಳ ಮಾಲತಿ ಸಾಹು ಎಂಬಾಕೆಯನ್ನು ಮದುವೆಯಾಗಿ. ಬೆಂಗಳೂರು ನಗರದ ಕಾಮಾಕ್ಷಿಪಾಳ್ಯದಲ್ಲಿ ಶ್ರೀ ಮುನಿಯಪ್ಪ ರವರ ಮನೆಯಲ್ಲಿ ಬಾಡಿಗೆದಾರರಾಗಿ ವಾಸವಾಗಿದ್ದರು. ಮಾಲತಿ ತನ್ನ ಅಕ್ಕ ಮತ್ತು ತಮ್ಮನೊಂದಿಗೆ ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಅಲ್ಲದೆ ಫೋನಿನಲ್ಲೆ ಹೆಚ್ಚಾಗಿ ಮಾತಾನಾಡುತಿದ್ದರಿಂದ ಆಕೆಯು ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದೆಂದು ಪತಿಗೆ ಅನುಮಾನ ಊಂಟಾಗಿದೆ. ದಿನಾಂಕ 19/06/2018 ರಂದು ಬೆಳಗ್ಗೆ ತಂದೆಗೆ ಕೊಡಲು ತಂದು ಇಟ್ಟಿದ್ದ ರೂ 2500/- ಗಳಲ್ಲಿ ಮಾಲತಿ ಪತಿ ಕೈಲಾಶ್ ಚಂದ್ ಬೆಹರ್ ಅನುಮತಿ ಇಲ್ಲದೇ ರೂ 1,000/-ಗಳನ್ನು ತೆಗೆದುಕೊಂಡಿದಾಳೆ ಇದೇ ವಿಚಾರವಾಗಿ ಉದ್ದೇಶಪೂರಕವಾಗಿ ಜಗಳ ತೆಗೆದಿದ್ದಾನೆ,ಜಗಳ ಜೋರಾಗಿ ಮನೆಯಲ್ಲಿ ತಲೆಯ ದಿಂಬಿನಿಂದ ಉಸಿರುಘಟ್ಟಿಸಿ ತನ್ನ ಪತ್ನಿಯನ್ನೆ ಕೊಲೆ ಮಾಡಿದ್ದಾನೆ, ನಂತರ ಆಕೆಯ ಶವವನ್ನು ಮಲಗಿದ ಸ್ಥಿತಿಯಲ್ಲಿ ಮಲಗಿಸಿ ಮೈಮೇಲೆ ಬೆಡ್‌ಶೀಟ್ ಬಟ್ಟೆಯನ್ನು ಹೊದಿಸಿ ಸಾಕ್ಷ್ಯವನ್ನು ನಾಶಪಡಿಸಿರುವ ಹಾಗೂ ಕೊಲೆ ಮಾಡಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೋಲೀಸರು ಈ ಎಲ್ಲಾ ವಿಚಾರಗಳನ್ನ ತನಿಖೆಯ ಮೂಲಕ ಕಲೆ ಹಾಕಿದಾದರೆ.ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.ಈ ಪ್ರಕರಣಕ್ಕೆ ಸಂಭದಿಸಿದಂತೆ ನ್ಯಾಲಯ ತೀಪ೯ನೀಡಿದೆ.