100 ಅಡಿ ಪ್ರಪಾತಕ್ಕೆ ಉರುಳಿಬಿತ್ತು ಲಾರಿ; ಡ್ರೈವರ್, ಕ್ಲೀನರ್ ಬಚಾವಾಗಿದ್ದೇ ಪವಾಡ..!
ಚಿಕ್ಕಮಗಳೂರು; ಚಿಕ್ಕಮಗಳೂರಿನ ಬಳಿ ಲಾರಿಯೊಂದು ಪ್ರಪಾತಕ್ಕೆ ಉರುಳಿಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸುಮಾರು ನೂರು ಅಡಿ ಆಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಲಾರಿಯ ಡ್ರೈವರ್ ಹಾಗೂ ಕ್ಲೀನರ್ ಯಾವುದೇ ತೊಂದರೆಯಿಲ್ಲದೆ ಬಚಾವಾಗಿ ಬಂದಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಸೋಮನಕಾಡು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ನೀರಿನ ಬಾಟಲಿಗಳನ್ನು ಈ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಬೆಳಗಿನ ಜಾವ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ಚಾಲಕನಿಗೆ ದಾರಿಯೇ ಕಾಣಿಸಿಲ್ಲ. ಒಂದು ಅಂದಾಜಿನ ಮೇಲೆ ಲಾರಿ ಓಡಿಸುತ್ತಿದ್ದ. ಈ ವೇಳೆ ದಾರಿ ಕಾಣದೆ ಲಾರಿ ರಸ್ತೆಯಿಂದ ಕೆಳಗಿಳಿದಿದೆ. ನೋಡನೋಡುತ್ತಿದ್ದಂತೆ ಅದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದಿದೆ.