CrimeDistricts

ವಿದ್ಯುತ್‌ ಬಿಲ್‌ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಕಲಬುರಗಿ; ಇತ್ತೀಚೆಗೆ ವಿದ್ಯುತ್‌ ಬಿಲ್‌ ಕೇಳಿದ್ದಕ್ಕೆ ಲೈನ್‌ಮ್ಯಾನ್‌ ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಮತ್ತೊಂದೆಡೆ ಊರಿನ ಹೆಂಗಸರೆಲ್ಲಾ ಸೇರಿ ಸಿಬ್ಬಂದಿಯನ್ನು ಹೊರಕಳುಹಿಸಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ ಖಾಜಿಗಲ್ಲಿಯಲ್ಲಿ ವಿದ್ಯುತ್‌ ಬಿಲ್‌ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಇಬ್ಬರ ಮೇಲೆ ದಾಳಿ ಮಾಡಲಾಗಿದ್ದು, ಇಬ್ಬರೂ ಆಸ್ಪತ್ರೆ ಸೇರಿದ್ದಾರೆ. 

ಜೆಸ್ಕಾಂ ಜೆಇ ಸಿದ್ದರಾಮಪ್ಪ, ಲೈನ್​ಮ್ಯಾನ್​ ಇಜಾಜ್​​ ಹಲ್ಲೆಗೊಳಗಾದ ಜೆಸ್ಕಾಂ ಸಿಬ್ಬಂದಿ. ಇಬ್ಬರನ್ನೂ ಆಳಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

Share Post