BengaluruCrime

ಜಿಗಣಿಯಲ್ಲಿ ಪಾಕಿಸ್ತಾನದ ಮೂಲದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

ಆನೇಕಲ್​; ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರು ಹೊರವಲಯದ ಆನೇಕಲ್‌ ತಾಲ್ಲೂಕು ಜಿಗಣಿಯಲ್ಲಿ ನೆಲೆಸಿದ್ದ ಪಾಕಿಸ್ತಾನ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.. ಭಾರತಕ್ಕೆ ಬಂದು ಅಕ್ರಮವಾಗಿ ಭಾರತದ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ ಆರೋಪಿ, ಹೆಂಡತಿ ಮಕ್ಕಳ ಜೊತೆ ಜಿಗಣಿಯಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ..
ಪಾಕಿಸ್ತಾನದ ಪ್ರಜೆಯಾಗಿರುವ ಆರೋಪಿ ವೈಯಕ್ತಿಕ ಕಾರಣದಿಂದ ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾಕ್ಕೆ ಬಂದು ನೆಲೆಸಿದ್ದ.. ಅಲ್ಲಿ ಓರ್ವ ಯುವತಿಯನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಾಗಿದ್ದರು.. ಅನಂತರ ಹೆಂಡತಿ ಮಕ್ಕಳ ಜೊತೆ ಆತ 2014ರಲ್ಲಿ ದೆಹಲಿಗೆ ಬಂದಿದ್ದಾನೆ.. ಅಲ್ಲಿ ಸ್ಥಳೀಯನೊಬ್ಬನ ನೆರವಿನೊಂದಿಗೆ ಭಾರತದ ದಾಖಲೆಗಳನ್ನು ಮಾಡಿಸಿಕೊಂಡಿದ್ದಾನೆ..
ಅನಂತರ ಆರೋಪಿ 2018ರಲ್ಲಿ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದಾರೆ.. ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.. ಇತ್ತೀಚಿಗೆ ಕೇಂದ್ರ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಜಿಗಣಿಯಲ್ಲಿ ವಾಸವಿದ್ದ ಶಂಕಿತ ಉಗ್ರ ಗಿರೀಶ್​ ಬೋರಾ ಅಲಿಯಾಸ್​ ಗೌತಮ್​ ಎಂಬಾತನನ್ನು ಬಂಧಿಸಿದ್ದರು. ಶಂಕಿತ ಉಗ್ರ ಅಸ್ಸಾಂನ ಗುವಾಹಟಿಯಲ್ಲಿ ಐದು ಕಡೆ ಐಇಡಿ ಬಾಂಬ್​ ಇಟ್ಟು ಬೆಂಗಳೂರಿನ ಜಿಗಣಿಯಲ್ಲಿ ನೆಲಸಿದ್ದನು. ಶಂಕಿತ ಉಗ್ರ ಅಲ್ಫಾ ಸಂಘಟನೆ ಸೇರಿದವನು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವ್ಯಕ್ತಿಯನ್ನು ಬಂಧಿಸಿ ಆತನಿಗಿರುವ ನಂಟಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ..

Share Post