CrimeNational

ಟ್ಯಾಟೂ ಹಾಕುವ ನೆಪದಲ್ಲಿ ಒಬ್ಬರಲ್ಲಾ..ಇಬ್ಬರಲ್ಲಾ ಏಳು ಯುವತಿಯರ ಮೇಲೆ ಅತ್ಯಾಚಾರ ಮಾಡಿದ ಕಿರಾತಕ

ಕೇರಳ: ಟ್ಯಾಟೂ ಹಾಕುವ ನೆಪದಲ್ಲಿ ಯುವಕನೊಬ್ಬ ಏಳು ಯುವತಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಸುಜೀಶ್ (35)ವರ್ಷದ ಯುಕವ ಕೇರಳದ ಎಡಪಲ್ಲಿಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿದ್ದ. ಇತ್ತೀಚೆಗೆ  ಯುವತಿಯೊಬ್ಬಳು ಟ್ಯಾಟೂ ಹಾಕಿಸಿಕೊಳ್ಳಲು ಆತನ ಸ್ಟುಡಿಯೋಗೆ ತೆರಳಿದ್ದಳು. ಹಚ್ಚೆ ಹಾಕುವ ನೆಪದಲ್ಲಿ ಸುಜೀಶ್ ಆಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ, ರೆಡ್ಡಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ಪೋಸ್ಟ್ ಆಧರಿಸಿ ಎರ್ನಾಕುಲಂ ಪೊಲೀಸರು ಸುಜೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಷಯ ಹೊರಬಿದ್ದ ಬಳಿಕ ಆತನಿಂದ ವಂಚನೆಗೆ ಒಳಗಾದ ಇತರ ಆರು ಮಹಿಳೆಯರು ಸುಜೀಶ್‌ನಿಂದ ತಮಗೂ ಮೋಸವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಜೀಶ್‌ನಿಂದ ತಮಗಾದ ಲೈಂಗಿಕ ಕಿರುಕುಳವನ್ನು ಪೊಲೀಸರಿಗೆ ವಿವರಿಸಿದ್ದಾರೆ.

ಕಾಮುಕ ಮಾಡಿದ ಕಿರಾತಕ ಕೆಲಸ ಆಚೆ ಬಂದ ಬಳಿಕ ಸುಜೀಶ್ ಪರಾರಿಯಾಗಿದ್ದಾನೆ.  ಶನಿವಾರ ರಾತ್ರಿ ವಕೀಲರನ್ನು ಭೇಟಿ ಮಾಡಲು ತೆರಳುತ್ತಿದ್ದ ಸುಜೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 164 ಬಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಂದು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುಜೀಶ್ ಕಳೆದ 10 ವರ್ಷಗಳಿಂದ ಟ್ಯಾಟೂ ಸ್ಟುಡಿಯೋ ನಡೆಸುತ್ತಿದ್ದಾರೆ. ಆತ ಎಲ್ಲರೆದರು ಬಹಿರಂಗವಾಗಿ ಟ್ಯಾಟೂ ಹಾಕಿದ್ದಾರೆ. ಯಾರಿಗೂ ಕಿರುಕುಳ ನೀಡಿಲ್ಲ ಎಂದು ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಹೇಳಿದ್ದಾರೆ. ಇದು ಸುಜೀಶ್ ವ್ಯವಹಾರವನ್ನು ಉರುಳಿಸುವ ಪಿತೂರಿಯ ಭಾಗವಾಗಿದೆ ಎಂದಿದ್ದಾರೆ.

Share Post