BengaluruCrime

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಗಂಡನ ವಿರುದ್ಧ ಆರೋಪ

ಬೆಂಗಳೂರು; ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕತೀಜಾ ಕೂಬ್ರ ಎಂಬಾಕೆಯೇ ಸಾವಿಗೀಡಾದ ಮಹಿಳೆ. ಗಂಡನ ಮನೆಯವರೇ ಕೊಲೆ ಮಾಡಿ ಕತೀಜಾ ಅವರನ್ನು ನೇಣಿಗೆ ಹಾಕಿದ್ಧಾರೆ ಎಂಬ ಆರೋಪ ಕೇಳಿಬಂದಿದೆ. ಕತೀಜಾ ಪೋಷಕರು ಈ ಬಗ್ಗೆ ಸದ್ದುಗುಂಟೆ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಪತಿ ಮೆಹಬೂಬ್ ಷರೀಫ್‌ ನೇ ಕತೀಜಾಳನ್ನು ಸಾಯಿಸಿದ್ದಾನೆ ಎಂದು ಕತೀಜಾ ಮನೆಯವರು ಆರೋಪ ಮಾಡಿದ್ದಾರೆ.  ಕತೀಜಾ ಗಂಡ ಮೆಹಬೂಬ್‌ ಷರೀಫ್, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share Post