ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ; ಮಾಜಿ ಶಾಸಕ ಸಾರಾ ಮಹೇಶ್‌ಗೂ ಸಂಕಷ್ಟ..?
ಬೆಂಗಳೂರು; ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಲಾಗಿತ್ತು.. ಈ ಪ್ರಕರಣದ ಸಂಬಂಧ ಈಗಾಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರೆಸ್ಟ್ ಆಗಿ ಬೇಲ್ ಮೇಲೆ ಹೊರಬಂದಿದ್ದಾರೆ.. ಇದೀಗ ಮಾಜಿ ಶಾಸಕ ಸಾರಾ ಮಾಹೇಶ್‌ಗೆ ಈ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.. ಮಾಜಿ ಶಾಸಕ ಸಾರಾ ಮಹೇಶ್ ಅವರಿಗೂ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಈ ಬಗ್ಗೆ ಇನ್ನೂ ಯಾವುದೂ ಅಧಿಕೃತವಾಗಿಲ್ಲ..
ತಾನು ಕಿಡ್ನಾಪ್ ಆಗಿಲ್ಲ ಅಂತ ಸುದ್ದಿಗೋಷ್ಠಿ ಮಾಡಲು ಸಾರಾ ಮಹೇಶ್ ಅವರು ಸಂತ್ರಸ್ತೆಗೆ ಒತ್ತಡ ಹೇರಿದ್ದರು ಎಂಬ ಆರೋಪ ಮಾಡಲಾಗಿದೆ.. ಇನ್ನು ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಉಲ್ಲೇಖವಾಗಿದೆ ಎಂದು ಹೇಳಲಾಗುತ್ತಿದೆ.. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸಾರಾ ಮಹೇಶ್ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಹೋಗಿ ಸುದ್ದಿಗೋಷ್ಠಿ ನಡೆಸಲು ಸಾರಾ ಮಹೇಶ್ ಸಿದ್ದತೆ ಮಾಡಿಕೊಂಡಿದ್ದರು.. ಆದ್ರೆ ಅಂದೇ ರೇವಣ್ಣ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು.. ಹೀಗಾಗಿ ಸುದ್ದಿಗೋಷ್ಠಿ ರದ್ದು ಮಾಡಿದ್ದರು ಎಂದು ಬಂಧಿತ ಆರೋಪಿ ಕೀರ್ತಿ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ..