ಕೆ.ಜೆ.ಜಾರ್ಜ್ ವಿರುದ್ಧ ಪೋಸ್ಟ್; ತೆಲಂಗಾಣ ರಾಜಕಾರಣಿ ಪುತ್ರನ ಅರೆಸ್ಟ್
ಬೆಂಗಳೂರು; ತೆಲಂಗಾಣದ ಬಿಆರ್‌ಎಸ್ ಪಾರ್ಟಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಒಬ್ಬರ ಪುತ್ರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕರೀಂನಗರ ನಿವಾಸಿ ರವಿಕಾಂತ್ ಶರ್ಮಾ ಎಂಬಾತನೇ ಬಂಧಿತ ಆರೋಪಿ. ಈತ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಇತ್ತೀಚೆಗೆ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಿತು. ಈ ವೇಳೆ ಬಿಆರ್‌ಎಸ್ ಪಾರ್ಟಿಯ ಐಟಿ ಸೆಲ್ ನಲ್ಲಿ ಆರೋಪಿ ರವಿಕಾಂತ್ ಶರ್ಮಾ ಕೆಲಸ ಮಾಡುತ್ತಿದ್ದ. ಇದೇ ವೇಳೆ ಈತ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆಯನ್ನು ಲೇವಡಿ ಮಾಡಿ ಪೋಸ್ಟ್ ಹಾಕಿದ್ದ. ಜೊತೆಗೆ ಕೆ.ಜೆ.ಜಾರ್ಜ್ ಅವರನ್ನು ಕೂಡಾ ಲೇವಡಿ ಮಾಡಲಾಗಿತ್ತು.
ಈ ವೇಳೆ ನಕಲಿ ಆಡಿಯೋ ಕ್ಲಿಪ್ ಶೇರ್ ಮಾಡಲಾಗಿತ್ತು. ಈ ಸಂಬಂದ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು.