HealthNational

ಜೋಕಾಲಿಯೇ ಉರುಳಾಯಿತು..!; ಆಟ ಆಡುವಾಗ ಮುದ್ದು ಹುಡುಗಿ ಸಾವು!

ಮಣಪ್ಪುರಂ; ಜೋಕಾಲಿ ಆಡುವಾಗ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಮಣಪ್ಪುರಂನಲ್ಲಿ ಈ ಘಟನೆ ನಡೆದಿದ್ದು, ಆರು ವರ್ಷದ ಹಯಾ ಫಾತಿಮಾ ಸಾವನ್ನಪ್ಪಿದ ಬಾಲಕಿ ಎಂದು ತಿಳಿದುಬಂದಿದೆ.

ಮಣಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂನ ನಿವಾಸಿ ಈಕೆ. ನಿನ್ನೆ ಶಾಲೆಗೆ ಹೋಗಿದ್ದ ಮಗು ಮನೆಗೆ ವಾಪಸ್‌ ಬಂದ ಮೇಲೆ ಮನೆಯಲ್ಲೇ ಜೋಕಾಲಿ ಆಡುತ್ತಿದ್ದಳು. ಈ ವೇಳೆ ಹಗ್ಗ ಕುತ್ತಿಗೆಗೆ ಬಿಗಿದಿದೆ. ಇದರಿಂದ ಆಕೆಯ ಉಸಿರುಗಟ್ಟಿದ್ದು, ಸಾವನ್ನಪ್ಪಿದ್ದಾಳೆ.

Share Post