ಗಾಜಾದಲ್ಲಿ ದಾಳಿಯನ್ನು ತೀವ್ರಗೊಳಿಸಿದ ಇಸ್ರೇಲ್ ಸೇನೆ
ಇಸ್ರೇಲ್ ಸೇನೆಯು ಗಾಜಾದಲ್ಲಿ ಕ್ಷೇತ್ರ ಮಟ್ಟದ ದಾಳಿಯನ್ನು ತೀವ್ರಗೊಳಿಸುತ್ತಿದೆ ಎಂದು ಘೋಷಿಸಿದೆ.
“ನಾವು ಗಾಜಾದಲ್ಲಿ ಸ್ಟ್ರೈಕ್‌ಗಳನ್ನು ಹೆಚ್ಚಿಸಿದ್ದೇವೆ. ನಾವು ಇಂದು ಸಂಜೆ ಭೂಸೇನಾ ಪಡೆಗಳೊಂದಿಗೆ ದಾಳಿಯನ್ನು ತೀವ್ರಗೊಳಿಸುತ್ತೇವೆ. ವಾಯುಪಡೆಯು ಭೂಗತ ಗುರಿಗಳು ಮತ್ತು ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ವ್ಯಾಪಕ ದಾಳಿಗಳನ್ನು ನಡೆಸುತ್ತದೆ” ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಡೇನಿಯಲ್ ಹಗರಿ ಶುಕ್ರವಾರ ಘೋಷಿಸಿದರು.
ಇಸ್ರೇಲಿ ಸೇನೆಯು ಮತ್ತೊಮ್ಮೆ ದಕ್ಷಿಣ ಗಾಜಾಕ್ಕೆ ತೆರಳುವಂತೆ ಅಲ್ಲಿನ ಸಾಮಾನ್ಯ ಜನರಿಗೆ ಸೂಚನೆ ನೀಡಿದೆ. ಏತನ್ಮಧ್ಯೆ, ಗಾಜಾದಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿವೆ.