BengaluruInternationalPolitics

ಮತ್ತೆ ವಿದೇಶ ಪ್ರವಾಸಕ್ಕೆ ಹೆಚ್ಡಿಕೆ; ದುಬೈನಲ್ಲಿ ಮಾಜಿ ಸಿಎಂ

ಬೆಂಗಳೂರು; ವಿಧಾನಸಭಾ ಚುನಾವಣೆ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿಯವರು ನಿರಂತರವಾಗಿ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಅವರು ಯೂರೋಪ್‌ ಹಾಗೂ ಕಾಂಬೋಡಿಯಾಗಳಿಗೆ ತೆರಳಿದ್ದರು. ಕುಟುಂಬದ ಸದಸ್ಯರ ಜೊತೆಗೂ ಅವರು ಪ್ರವಾಸ ಮಾಡಿದ್ದರು. ಇದೀಗ ಮತ್ತೆ ಅವರು ವಿದೇಶಕ್ಕೆ ಹಾರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ -ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಬಳಿಕ ಕುಮಾರಸ್ವಾಮಿಯವರು ರಾಜಕೀಯದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅನಾರೋಗ್ಯದ ನಡುವೆಯೂ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ. ಕೆಲ ದಿನಗಳಿಂದ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿಯವರು ಈಗ ದುಬೈಗೆ ಹಾರಿದ್ದಾರೆ.

5 ದಿನಗಳ ದುಬೈ ಪ್ರವಾಸ ಇದಾಗಿದೆ. ಕಳೆದ ಬಾರಿ ಹೆಚ್‍ಡಿಕೆ ಫಾರಿನ್ ಟೂರ್ ನಿಂದ ವಾಪಸ್ ಬರ್ತಿದ್ದಿದ್ದಂತೆ ಚಾರ್ಜ್‍ಶೀಟ್ ಪಾಲಿಟಿಕ್ಸ್ ಶುರುವಾಗಿತ್ತು. ಇದೀಗ ಅವರು ದುಬೈಗೆ ಹೋಗುತ್ತಿದ್ದು, ವಾಪಸ್‌ ಬಂದ ಮೇಲೆ ಇನ್ನೂ ಏನೇನು ಬಾಂಬ್‌ಗಳನ್ನು ಎಸೆಯುತ್ತಾರೋ ನೋಡಬೇಕು.

Share Post