CrimeNational

ಚುರುಕುಗೊಂಡ ಮಣಿಪುರ ಹಿಂಸಾಚಾರದ ತನಿಖೆ; 53 ಸಿಬಿಐ ಅಧಿಕಾರಿಗಳ ನೇಮಕ

ಇಂಫಾಲ್; ಮಣಿಪುರದಲ್ಲಿ ನಡೆದ ಹಿಂಸಾಚಾರ ಸಂಬಂಧ ತನಿಖೆ ಚುರುಕುಗೊಂಡಿದೆ. ಸಿಬಿಐ ಅಧಿಕಾರಿಗಳು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ದೇಶದ ವಿವಿಧ ಘಟಕಗಳಿಂದ ಸುಮಾರು 53 ಅಧಿಕಾರಿಗಳನ್ನು ಆಯ್ಕೆ ಮಾಡಿ, ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ. ಇದರಲ್ಲಿ 29 ಮಹಿಳಾ ಸಿಬ್ಬಂದಿ ಕೂಡಾ ಸೇರಿದ್ದಾರೆ. 

ಡಿಐಜಿಗಳಾದ ಲವ್ಲಿ ಕಟಿಯಾರ್, ನಿರ್ಮಲಾ ದೇವಿ ಮತ್ತು ಮೋಹಿತ್ ಗುಪ್ತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಜ್‍ವೀರ್ ಅವನ್ನೊಳಗೊಂಡ ತಂಡ ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ ಅವರಿಗೆ ವರದಿ ಸಲ್ಲಿಸಲಿದೆ. ಇಷ್ಟು ದೊಡ್ಡ ಸಂಖ್ಯೆಯ ಮಹಿಳಾ ಅಧಿಕಾರಿಗಳನ್ನು ಏಕಕಾಲದಲ್ಲಿ ಸೇವೆಗೆ ನಿಯೋಜಿಸಲಾದ ಮೊದಲ ಪ್ರಕರಣ ಇದಾಗಿದೆ. ಅಲ್ಲದೆ 16 ಇನ್ಸ್‌ಪೆಕ್ಟರ್‌ ಮತ್ತು 10 ಸಬ್‍ಇನ್ಸ್‌ಪೆಕ್ಟರ್ ಸಹ ತಂಡದ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಲ್ಲದೆ, ಅತ್ಯಾಚಾರ ಎಸಗಿದ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳ ಬಗ್ಗೆ ಈ ತಂಡ ತನಿಖೆ ನಡೆಸಲಿದೆ.

 

Share Post