CrimeNational

ಕನ್ನಡಿಗರಿಗೆ ಕೇರಳದಲ್ಲಿ ಅನ್ಯಾಯ; ಶಬರಿಮಲೆಯಲ್ಲಿ ಮಾಲಾಧಾರಿಗಳಿಂದ ಪ್ರೊಟೆಸ್ಟ್‌

ಕೇರಳ; ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳನ್ನು ಕೇರಳ ಪೊಲೀಸರು ತಡೆದಿದ್ದಾರೆ. ಇದರಿಂದ ಅಸಮಧಾನಗೊಂಡಿರುವ ಕರ್ನಾಟಕದ ಮಾಲಾಧಾರಿಗಳು ಕೇರಳ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆ ಕೊಟ್ಟಾಯಂ ಜಿಲ್ಲೆಯ ಎರುಮಲೆಯಲ್ಲಿ ನಡೆದಿದೆ.

ಕೇರಳದಲ್ಲಿ ಕನ್ನಡಿಗರಿಗೆ ನಿರಂತವಾಗಿ ಅಪಮಾನ, ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳ ನಡುವೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿರುವ ಕರ್ನಾಟಕದ ಮಾಲಾಧಾರಿಗಳ ವಾಹನಗಳನ್ನ ಎರುಮಲೆಯಲ್ಲಿ ಕೇರಳ ಪೊಲೀಸರು ತಡೆದಿದ್ದಾರೆ. ಆನ್ ಲೈನ್ ನಲ್ಲಿ ಬುಕಿಂಗ್ ಮಾಡಿಕೊಂಡಿರುವವರಿಗೆ ಮಾತ್ರ ಶಭರಿಪೀಠಕ್ಕೆ ತೆರಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಮಾಲಾಧಾರಿಗಳು ಆರೋಪಿಸಿದ್ದಾರೆ.

ಮಕರ ಸಂಕ್ರಾಂತಿಯ ದಿನದಂದು ಬೆಟ್ಟದಲ್ಲಿ ಕಾಣುವ ಮಕರ ಜ್ಯೋತಿಯನ್ನ ನೋಡಲು ದೇಶ ವಿದೇಶಗಳಿಂದ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಆಗಮಿಸುತ್ತಾರೆ. ಶಬರಿಮಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಮಕರ ಸಂಕ್ರಾಂತಿಯಂದು ಹೆಚ್ಚಾಗಿರುತ್ತದೆ. ಇದರಿಂದ ಜನದಟ್ಟಣೆ, ವಾಹನ ದಟ್ಟಣೆ ನಿಯಂತ್ರಿಸಲು ಎರುಮಲೆಯಲ್ಲೆ ವಾಹನಗಳನ್ನ ತಡೆಯಲಾಗಿದೆ ಎಂದು ಎಸ್ಪಿ ಕಾರ್ತಿಕ್ ತಿಳಿಸಿದ್ದಾರೆ ಎಂದು ಮಾಲಾಧಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದ ಮಾಲಾಧಾರಿಗಳು 48 ಕಿ.ಮೀ. ದೊಡ್ಡಪಾದದಲ್ಲಿ ನಡೆಯುವ ಮೂಲಕ ಬೆಟ್ಟಗುಡ್ಡ ನದಿಗಳನ್ನ ದಾಟಿ ಶಬರಿಪೀಠಕ್ಕೆ ತೆರಳಬೇಕಾದ ಅನಿವಾರ್ಯ ಸೃಷ್ಠಿಯಾಗಿದೆ. ಮಕರ ಜ್ಯೋತಿ ದರ್ಶನಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ನಡೆದು ತೆರಳಲು ಸಾದ್ಯವಾಗುವುದಿಲ್ಲ ಎಂದು ಮಾಲಾಧಾರಿಗಳು ಆರೋಪಿಸಿದ್ದಾರೆ. ಅದರಲ್ಲೂ ಕರ್ನಾಟಕದ ವಾಹನಗಳನ್ನೇ ಟಾರ್ಗೆಟ್ ಮಾಡಿ ತಡೆಹಿಡಿಯಲಾಗಿದೆ ಎಂದು ಭಕ್ತರೊಬ್ಬರು ಆರೋಪಿಸಿದ್ದಾರೆ.

Share Post