ಮಧ್ಯರಾತ್ರಿ ಪ್ರಿಯತಮೆಗೆ ಫಿಜ್ಜಾ ಕೊಡಲು ಬಂದು ಹೆಣವಾದ..!
ಹೈದರಾಬಾದ್; ಯುವಕನೊಬ್ಬ ಮಧ್ಯರಾತ್ರಿಯಲ್ಲಿ ತನ್ನ ಗೆಳತಿಗೆ ಫಿಜ್ಜಾ ಕೊಡಲು ಹೋಗಿ, ಮನೆಯ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಬೋರಬಂಡಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಶೋಯೆಬ್ ಎಂಬಾತನೇ ಮೃತಪಟ್ಟಿರುವ ವ್ಯಕ್ತಿ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗಾಗಿ ಮಧ್ಯರಾತ್ರಿ ಫಿಜ್ಜಾ ತೆಗೆದುಕೊಂಡು ಹೋಗಿದ್ದ. ನಾಲ್ಕು ಮಹಡಿಯ ಕಟ್ಟಡವೇರಿ, ಪ್ರಿಯತಮೆ ಜೊತೆ ಇದ್ದ. ಇದೇ ವೇಳೆ ಯುವತಿಯ ತಂದೆ ಮೆಟ್ಟಿಲು ಹತ್ತಿ ಬರುತ್ತಿರುವುದನ್ನು ನೋಡಿದ್ದಾನೆ. ಕೂಡಲೇ ಬಚ್ಚಿಟ್ಟಿಕೊಳ್ಳಲು ಹೋಗಿದ್ದಾನೆ. ಈ ವೇಳೆ ಆಯತಪ್ಪಿ ನಾಲ್ಕು ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.
ಕೂಡಲೇ ಆತನನ್ನು ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದಾಗಿ ಬೆಳಗಿನಜಾವ 5.30ರ ಸುಮಾರಿಗೆ ಆತ ಮೃತಪಟ್ಟಿದ್ದಾನೆ. ಯುವಕನ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.