CrimeInternational

ತಾಲಿಬಾನ್‌ ಆಡಳಿತ ಪ್ರದೇಶದಲ್ಲಿ ಸ್ಫೋಟ : ಮಕ್ಕಳ ಮಾರಣಹೋಮ

ಕಾಬೂಲ್: ತಾಲಿಬಾನ್‌ ಆಡಳಿತ ಪ್ರದೇಶ ಪಾಕಿಸ್ತಾನ ಗಡಿ ಸಮೀಪ ಸ್ಪೋಟವುಂಟಾಗಿ ಒಂಭತ್ತು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಪೂರ್ವ ಪಾಕಿಸ್ತಾನದಲ್ಲಿ ನಡೆದಿದೆ. ದುರ್ಘಟನೆ ಬಗ್ಗೆ ತಾಲಿಬಾನ್‌ ಆಡಳಿತ ನೇಮಿಸಿರುವ ಗವರ್ನರ್‌ ಕಚೇರಿಯು ಮಾಹಿತಿ ನೀಡಿದೆ. ಇನ್ನೂ ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಫ್ಗಾನಿಸ್ತಾನದ ನಗರ್‌ಹಾರ್ ಪ್ರಾಂತ್ಯದ ಲಾಲೊಪರ್‌ ಎಂಬಲ್ಲಿ ಸ್ಫೋಟ ಸಂಭವಿಸಿದ್ದು, ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ  ಹೆಚ್ಚಿನ ವಿವರ ಲಭ್ಯವಾಗಿಲ್ಲ. ಸ್ಫೋಟಕ್ಕೆ ಕಾರನ ಏನು ಮತ್ತು ಯಾರು ಎಂಬುದರ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಸ್ಫೋಟ ಸಂಭವಿಸಿದ ಪ್ರಾಂತ್ಯವು ಇಸ್ಲಾಮಿಕ್ ಸ್ಟೇಟ್ (ಐಎಸ್) ಗ್ರೂಪ್ ಹಿಡಿತದಲ್ಲಿರುವ ಪ್ರದೇಶವಾಗಿದೆ. ಐಎಸ್ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ಬಳಿಕ  ಈ ಪ್ರದೇಶದಲ್ಲಿ ಇಂತಹ ದಾಳಿಗಳು ಸರ್ವೆ ಸಾಮಾನ್ಯವಾಗಿವೆ. ತಾಲಿಬಾನ್‌ ಆಡಳಿತ ಹಾಗೂ ಉಗ್ರರ ನಡುವೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.

Share Post