CrimeDistrictsPolitics

ಬೀದರ್‌ನಲ್ಲಿ ಅಪಾರ ಪ್ರಮಾಣದ ನಗದು, ಬೆಳ್ಳಿ ನಾಣ್ಯಗಳ ವಶ

ಬೀದರ್; ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಕ್ರಮಗಳು ಜೋರಾಗುತ್ತಿವೆ. ಬೀದರ್‌ನಲ್ಲಿ ಇವತ್ತು ಅಪಾರ ಪ್ರಮಾಣದ ಹಣ ಹಾಗೂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಹೈದರಾಬಾದ್‌ನಿಂದ ಬೀದರ್‌ಗೆ ತರುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಬೀದರ್ – ತೆಲಂಗಾಣ ಗಡಿಯ ಶಾಪೂರ್ ಬಳಿ ಇರುವ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ ಕಾರೊಂದರಲ್ಲಿ ಹಣ ಹಾಗೂ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಸುಮಾರು 18 ಲಕ್ಷ ರೂಪಾಯಿ ನಗದು, ಐದು ಗ್ರಾಂನ 1250 ಬೆಳ್ಳಿ ನಾಣ್ಯಗಳು, 1 ಗ್ರಾಂನ 1000 ಬೆಳ್ಳಿ ನಾಣ್ಯಗಳನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿದ್ದವರು ಇದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಜಪ್ತಿ ಮಾಡಲಾಗಿದ್ದು, ಕಾರನ್ನು ಕೂಡಾ ಸೀಜ್‌ ಮಾಡಲಾಗಿದೆ.

Share Post