CrimeNational

ನಾನು ಸೂಪರ್‌ಮ್ಯಾನ್‌ ಎಂದು ಶಾಲಾ ಕಟ್ಟಡದಿಂದ ಜಿಗಿದ 8 ವರ್ಷದ ಬಾಲಕ..!

ಕಾನ್ಪುರ; ಮಕ್ಕಳು ಈಗ ಮೊಬೈಲ್‌ ದಾಸರಾಗಿತ್ತಿದ್ದಾರೆ. ಅದರಲ್ಲಿ ವಿಡಿಯೋಗಳನ್ನು ನೋಡಿ, ವಿಡಿಯೋ ಗೇಮ್‌ಗಳನ್ನು ಆಡಿ ಅದರಂತೆ ಆಡಲು ಶುರು ಮಾಡುತ್ತಿದ್ದಾರೆ. ಅದೇ ರೀತಿಯ ಮೊಬೈಲ್‌ದಾಸನಾಗಿದ್ದ ಎಂಟು ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಹಾರಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ದುರ್ಘಟನೆ ನಡೆದಿದೆ. ಸ್ಪೈಡರ್‌ ಮ್ಯಾನ್‌, ಸೂಪರ್‌ ಮ್ಯಾನ್‌ ನಂತಹ ವಿಡಿಯೋಗಳನ್ನು ನೋಡುತ್ತಿದ್ದ ವಿದ್ಯಾರ್ಥಿಗಳು ಬೆಟ್‌ ಕಟ್ಟಿದ್ದಾರೆ. ನಮ್ಮಲ್ಲಿ ಯಾರು ಸೂಪರ್‌ ಮ್ಯಾನ್‌ ಎಂದು ಕೇಳಿದ್ದಾರೆ. ವಿದ್ಯಾರ್ಥಿಯೊಬ್ಬ ಜೋಷ್‌ನಲ್ಲಿ ನಾನೇ ಸೂಪರ್‌ ಮ್ಯಾನ್‌ ಎಂದಿದ್ದಾನೆ. ಬೆಟ್‌ ಕಟ್ಟಿದರೆ ಶಾಲಾ ಕಟ್ಟಡದಿಂದ ಜಿಗಿದು ತೋರಿಸುತ್ತೇನೆ ಎಂದಿದ್ದಾರೆ. ಹಾಗೆ ನೋಡನೋಡುತ್ತಿದ್ದಂತೆ ವಿದ್ಯಾರ್ಥಿ ಶಾಲೆಯ ಒಂದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. \

ಬಾಲಕನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

Share Post