CrimeNational

ಇದ್ದಕ್ಕಿದ್ದಂತೆ ಐವತ್ತು ಅಡಿ ಆಳಕ್ಕೆ ಕುಸಿಯಿತು ಮನೆ; ಏನಿದು ವಿಚಿತ್ರ..?

ಚಂದ್ರಾಪುರ(ಮಹಾರಾಷ್ಟ್ರ); ಮಹಾರಾಷ್ಟ್ರದ ಚಂದ್ರಾಪುರದ ಘುಗೂಸ್‌ ಎಂಬಲ್ಲಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿದೆ. ಮನೆಯಲ್ಲಿದ್ದವರು ಎಚ್ಚೆತ್ತಿದ್ದರಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಮುನ್ನೆಚ್ಚರಿಕೆಯಿಂದ ಕೆಲವೇ ಕ್ಷಣಗಳಲ್ಲಿ ಮನೆಯಿಂದ ಹೊರಬಂದಿದ್ದರಿಂದ ಮನೆಯವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

   ಕುಟುಂಬ ಸದ್ಯಸ್ಯರು ಮನೆಯಲ್ಲಿದ್ದಾಗ ಮನೆ ಮಧ್ಯೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿದೆ. ಇದ್ರಿಂದ ಆತಂಕಗೊಂಡ ಮನೆಯವರು ಹೊರಗೆ ಓಡಿಬಂದಿದ್ದಾರೆ. ಅವರು ಹೊರಗೆ ಬರುತ್ತಿದ್ದಂತೆ ಇಡೀ ಮನೆ ಐವತ್ತು ಅಡಿ ಆಳಕ್ಕೆ ಕುಸಿದಿದೆ.

 ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಬ್ರಿಟಿಷರ ಕಾಲದಲ್ಲಿ, ಘುಗೂಸ್​​ನಲ್ಲಿ ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ ಇತ್ತು. ತೆರೆದ ಹೊಂಡಗಳಿಂದ ಗಣಿಗಾರಿಕೆ ಮಾಡಲಾಗಿತ್ತು. ಆ ಸಮಯದಲ್ಲಿ ನಗರದ ವಿಸ್ತರಣೆ ಹೆಚ್ಚಾಗಿ ಗಣಿ ಬಳಿ ನಾಗರಿಕರು ಮನೆ ಕಟ್ಟಿಕೊಂಡಿದ್ದಾರೆ. ಸದ್ಯ ಇಡೀ ಘುಗೂಸ್ ನಗರವು ಭೂಗತ ಕಲ್ಲಿದ್ದಲು ಗಣಿ ಮೇಲೆ ನೆಲೆಗೊಂಡಿದೆ ಎನ್ನಲಾಗ್ತಿದೆ.

Share Post