ಡೇಟಿಂಗ್ ಆಪ್ ಪ್ರೇಮಿಗಳ ಮನಸ್ತಾಪ; ಪ್ರಿಯಕರಿಗೆ ಗೂಸಾ ಕೊಡಿಸಿದ ಪ್ರಿಯತಮೆ..!
ಬೆಂಗಳೂರು; ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಯ ನಡುವೆ ಮನಸ್ತಾಪವಾಗಿದ್ದು, ಪ್ರಿಯತಮೆ ಪ್ರಿಯಕರನನ್ನು ಕಿಡ್ನ್ಯಾಪ್ ಮಾಡಿಸಿ, ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದೆ.
ಮಹದೇವ್ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಈ ಸಂಬಂಧ ಇಬ್ಬರು ಯುವತಿಯರು ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಮಹದೇವ್ ಹಾಗೂ ಯುವತಿ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಇಬ್ಬರೂ ಲಿವ್‌ಇನ್ ರಿಲೇಶನ್ ಶಿಪ್‍ನಲ್ಲಿದ್ದರು. ಆದ್ರೆ ಮಹದೇವ್‍ಗೆ ಬೇರೆ ಹುಡುಗಿಯೊಂದಿಗೆ ಸಂಬಂಧ ಇದೆ ಎಂದು ಯುವತಿಗೆ ಅನುಮಾನ ಬಂದಿದೆ. ಯುವಕನಿಗೂ ಯುವತಿ ಮೇಲೆ ಅದೇ ಅನುಮಾನ ಮೂಡಿದೆ. ಹೀಗಾಗಿ ಇಬ್ಬರೂ ಬೇರೆಬೇರೆಯಾಗಿದ್ದರು.
ಇದ್ದಕ್ಕಿದ್ದಂತೆ ಕಳೆದ ವಾರ ಕೊನೆ ಬಾರಿ ನಿನ್ನ ನೋಡಬೇಕು ಎಂದು ಯುವತಿ ಕರೆ ಮಾಡಿ ಮಹದೇವ್ ನನ್ನು ಕರೆಸಿಕೊಂಡಿದ್ದಾಳೆ. ಈ ವೇಳೆ ಮಹದೇವ್ ನನ್ನು ಸ್ನೇಹಿತರ ಜೊತೆಗೂಡಿ ಕಾರಿನಲ್ಲಿ ಯುವತಿ ಕಿಡ್ನ್ಯಾಪ್ ಮಾಡಿದ್ದಾಳೆ. ನಂತರ ಯುವಕನ ಮೇಲೆ ಹಲ್ಲೆ ನಡೆಸಿ, ಆತನ ಮನೆಗೆ ವಾಪಸ್ ಬಿಟ್ಟು ಪರಾರಿಯಾಗಿದ್ದಾಳೆ. ಇದೀಗ ಈ ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಲಾಗಿದೆ.\