ನಟಿಯಿಂದ 75 ವರ್ಷದ ನಿವೃತ್ತ ಯೋಧನಿಗೆ ಹನಿಟ್ರ್ಯಾಪ್
ತಿರುವನಂತಪುರ; ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದ್ರಲ್ಲೂ ನಿವೃತ್ತರನ್ನೇ ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ನಟಿಯರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಹಾಗೆ ಕೇರಳದಲ್ಲಿ 75 ವರ್ಷದ ನಿವೃತ್ತ ಸೈನಿಕನಿಗೆ ಹನಿಟ್ರ್ಯಾಪ್ ಮಾಡಿ 25 ಲಕ್ಷ ರೂಪಾಇಗೆ ಬೇಡಿಕೆ ಇಡಲಾಗಿದೆ. 11 ಲಕ್ಷ ರೂಪಾಯಿ ಕೊಟ್ಟರೂ, ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ನಿವೃತ್ತ ಸೈನಿಕ ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸರು ಹನಿಟ್ರ್ಯಾಪ್ ಮಾಡಿದ್ದ ನಟಿ ನಿತ್ಯಾ ಶಶಿ ಹಾಗೂ ಆಕೆಯ ಸ್ನೇಹಿತ ಬಿನು ಸೇರಿ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಿತ್ಯಾ ಹಾಗೂ ಆಕೆಯ ಸ್ನೇಹಿತರು ನಿವೃತ್ತ ಸೈನಿಕನ ಮನೆಗೆ ಬಂದಿದ್ದು, ಬಲವಂತವಾಗಿ ಅವರ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.