International

ನಮ್ಮ ರಕ್ಷಣೆಗೆ ಭಾರತೀಯ ಯೋಧರನ್ನು ಕಳುಹಿಸಿ-ಯುಪಿ ವಿದ್ಯಾರ್ಥಿನಿ ಕಣ್ಣೀರು

ಉಕ್ರೇನ್:‌ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ರಕ್ಷಣೆಗಾಗಿ ಕಣ್ಣೀರು ಹಾಕಿ ಕೈ ಜೋಡಿಸಿ ವಿನಂತಿಸುತ್ತಿರುವ  ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರೆದಿದ್ದು, ಅಲ್ಲಿಗೆ ವಿದ್ಯಾಭ್ಯಾಸ ಮಾಡಲು ಹೋದ ಕೆಲವು ವಿದ್ಯಾರ್ಥಿಗಳು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಯುದ್ಧ ಮುಂದುವರಿದಿದೆ. ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಗಡಿಯಿಂದ ರೊಮೇನಿಯಾ, ಹಂಗೇರಿ ಮತ್ತು ಪೋಲೆಂಡ್ ಮೂಲಕ ಬಸ್‌ಗಳ ಮೂಲಕ ಸಾಗಿಸಲಾಗುತ್ತಿದೆ. ಉಕ್ರೇನ್ ಬಾಂಬ್ ದಾಳಿಯಲ್ಲಿ ಸಾವಿರಾರು ಭಾರತೀಯ ನಾಗರಿಕರು ಸಿಕ್ಕಿಬಿದ್ದಿದ್ದಾರೆ ಅವರನ್ನು ಭಾರತಕ್ಕೆ ಮರಳಿ ತರುವಂತೆ ಕೇಂದ್ರ ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆಕೆ ಭಾರತ ಸರ್ಕಾರದ ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ “ಜೈ ಹಿಂದ್, ಜೈ ಭಾರತ್ .. ದಯವಿಟ್ಟು ನಮಗೆ ಸಹಾಯ ಮಾಡಿ.” ಎಂದು ಬೇಡಿಕೊಂಡಿದ್ದಾಳೆ.

ಉತ್ತರ ಪ್ರದೇಶದ ಲಕ್ನೋ ನಿವಾಸಿ ಗರಿಮಾ ಮಿಶ್ರಾ ಅವರು ಸಹಾಯಕ್ಕಾಗಿ ಮನವಿ ಮಾಡಿದ್ರೂ ಯಾರೂ ನಮಗೆ ಸ್ಪಂದಿಸುತ್ತಿಲ್ಲ. ‘ನಾವು ಎಲ್ಲಾ ಕಡೆಯಿಂದ ಬಂಧಿಯಾಗಿದ್ದೇವೆ .. ಯಾರೂ ಸಹಾಯ ಮಾಡುತ್ತಿಲ್ಲ, ಸಹಾಯ ಮಾಡ್ತಾರೆಂಬ ವಿಶ್ವಾಸವೂ ಹೊರಟು ಹೋಗಿದೆ’.

“ನಾವು ಇರುವ ಸ್ಥಳಕ್ಕೆ ಹೊರಗಡೆಯಿಂದ ಬಂದ ಜನರು  ಹರಸಾಹಸಪಟ್ಟು ಒಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ಏನಾಗುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ.  ‘ಇಂತಹ ಪರಿಸ್ಥಿತಿಯನ್ನು ನಾವು ಚಲನಚಿತ್ರಗಳಲ್ಲಿ ನೋಡಿದ್ವಿ, ನಮ್ಮನ್ನು ರಕ್ಷಿಸಲು ನಮ್ಮ ಸರ್ಕಾರವಿದೆ ಎಂದು ನಾವು ಭಾವಿಸಿದ್ವಿ. ಆದರೆ ಈಗ ಹಾಗಾಗುವಂತೆ ಕಾಣುತ್ತಿಲ್ಲ. ದಯವಿಟ್ಟು ಭಾರತೀಯ ಸೇನೆಯನ್ನು ಕಳುಹಿಸಿ .. ಇಲ್ಲದಿದ್ದರೆ ನಾವು ಇಲ್ಲಿಂದ ಹೊರಬರಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ.

ಉಕ್ರೇನ್‌ನಲ್ಲಿ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಅನೇಕ ವಿದ್ಯಾರ್ಥಿಗಳು ತಾವು ಅಡಗಿರುವ  ಬಂಕರ್‌ಗಳು ಮತ್ತು ಆಶ್ರಯ ತಾಣಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Share Post