CrimeNational

ಗೆಳತಿಯನ್ನು ಕೊಂದಿದ್ದ ವ್ಯಕ್ತಿ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಚಂಡೀಗಢ; ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಶಂಕಿಸಿ ಗೆಳತಿಯನ್ನು ಕೊಂದಿದ್ದ ಯುವಕ ಕೊರ್ಟ್‌ ಸಂಕೀರ್ಣದ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.

ಮಹೇಂದರ್ (24) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಮತ್ತೊಬ್ಬ ವ್ಯಕ್ತಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಶಂಕಿಸಿ ಆರೋಪಿ ಮಹೇಂದರ್‌ ತನ್ನ ಗೆಳತಿಯನ್ನು ಬುಧವಾರ ಸಾಯಿಸಿದ್ದ.

ಸಾಯುವ ಮೊದಲು ರೋಹಿಣಿ ತನ್ನ ಸಹೋದರನಿಗೆ ಕರೆ ಮಾಡಿ ಮಹೇಂದರ್‌ ಹಲ್ಲೆ ನಡೆಸಿರುವುದಾಗಿ ಹೇಳಿದ್ದಳು. ಹೀಗಾಗಿ ಆತನನ್ನು ಬಂಧಿಸಲಾಗಿತ್ತು.

ಶುಕ್ರವಾರ ಮಹೇಂದರ್‌ನನ್ನು ಫರಿದಾಬಾದ್‌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

 

Share Post