CinemaCrimeNational

ಹಿಂದಿ ಕಿರುತೆರೆ ನಟ ಸಿದ್ಧಾಂತ್‌ ಜಿಮ್‌ನಲ್ಲಿ ಕುಸಿದುಬಿದ್ದು ಸಾವು

ಮುಂಬೈ; ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ ಸೂರ್ಯವಂಶಿ ಜಿಮ್ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಿದ್ಧಾಂತ್‌ ಸೂರ್ಯವಂಶಿ ಎಂದಿನಂತೆ ಇಂದು ಬೆಳಗ್ಗೆ ಕೂಡಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.

ಹಿಂದಿ ಕಿರುತೆರೆಯಲ್ಲಿ ಸಿದ್ಧಾಂತ್ ಸೂರ್ಯವಂಶಿ ದೊಡ್ಡ ಹೆಸರು ಮಾಡಿದ್ದರು.  2017ರಲ್ಲಿ ಅಲೇಸಿಯಾ ಮತ್ತು ಸಿದ್ದಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಸೌಟಿ ಜಿಂದಗಿ ಕೇ, ಮಮತಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ.

 

Share Post