ಜಿಮ್ ರಿಸೆಪ್ಷನಿಸ್ಟ್ ಅನುಮಾನಾಸ್ಪದ ಸಾವು!; ಆ ಯುವತಿ ವಿಷ ಸೇವಿಸಿದ್ದೇಕೆ..?
ಬೆಂಗಳೂರು; ಜಿಮ್ ಒಂದು ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಜಿಮ್‌ನಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಶ್ರಾವಣಿ ಸಾವನ್ನಪ್ಪಿದ್ದಾಳೆ..
ಎಂಟನೇ ಮೈಲಿಯಲ್ಲಿರುವ ಗೋಲ್ಡನ್ ಜಿಮ್‌ನಲ್ಲಿ ಶ್ರಾವಣಿ ಕೆಲಸ ಮಾಡುತ್ತಿದ್ದಳು.. ಎರಡು ದಿನದ ಹಿಂದೆ ಕೆಲಸಕ್ಕೆ ಬಂದಾಗ ಆಕೆ ಜಿಮ್‌ನಲ್ಲಿ ವಾಂತಿ ಮಾಡಿಕೊಂಡಿದ್ದಾಳೆ.. ಕೂಡಲೇ ಜಿಮ್‌ನಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಆದ್ರೆ ಕೆಲ ಹೊತ್ತಿನ ನಂತರ ಆಕೆ ಮೃತಪಟ್ಟಿದ್ದಾಳೆ.. ಪೊಲೀಸರು ತನಿಖೆ ನಡೆಸಿದಾಗ ಆಕೆ ವಿಷ ಸೇವಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ..
ಮೃತ ಶ್ರಾವಣಿ ದಾವಣಗೆರೆ ಮೂಲದವಳಾಗಿದ್ದು, ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು.. ಪೋಷಕರು ಮದುವೆ ಮಾಡಲು ತೀರ್ಮಾನ ಮಾಡಿದ್ದರು.. ಆದ್ರೆ ಪೋಷಕರು ನೋಡಿದ ಹುಡುಗನನ್ನು ಮದುವೆಯಾಗಲು ಆಕೆ ನಿರಾಕರಿಸಿದ್ದರು ಎಂದು ತಿಳಿದುಬಂದಿದೆ… ಆದ್ರೆ ಮಗಳ ಮನವೊಲಿಸಲು ಪೋಷಕರು ಬೆಂಗಳೂರಿಗೆ ಬಂದಿದ್ದರು.. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ..