125 ಕೋಟಿ ವಂಚನೆ – BSF ಅಧಿಕಾರಿ ಬಂಧನ, 14ಕೋಟಿ ಮತ್ತು ಕಾರು ವಶ
ಬೆಂಗಳೂರು : 125 ಕೋಟಿ ವಂಚನೆ ಆರೋಪದಡಿ ಬಿಎಸ್‌ಎಫ್ ಅಧಿಕಾರಿ ಪ್ರವೀಣ್ ಯಾದವ್ ಅವರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಎಸ್ ಎಸ್ ಜಿಯಲ್ಲಿ ಟೆಂಡರ್ ಕಾಂಟ್ರಾಕ್ಟ್ ಅನ್ನು ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿರುವ ಪ್ರಕರಣದಡಿಯಲ್ಲಿ ಪ್ರವೀಣ್ ಅವರನ್ನು ಬಂಧಿಸಲಾಗಿದೆ.
ಪ್ರವೀಣ್ ಯಾದವ್ ಗಡಿ ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯಿಂದ 14ಕೋಟಿ ನಗದು, 1ಕೋಟಿ ಮೌಲ್ಯದ ಚಿನ್ನಾಭರಣ, ಬಿಎಂಡಬ್ಲ್ಯೂ, ಮರ್ಸೀಡಿಸ್ ಸೇರಿದಂತೆ ಏಳು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಯು ಗುರುಗ್ರಾಮದ ಮಣೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ದಳದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರವೀಣ್ ವಂಚನೆ ಮಾಡಿಡುವುದು ಬೆಳಕಿಗೆ ಬಂದಿದೆ.
ಈ ಕೃತ್ಯಕ್ಕೆ ಪ್ರವೀಣ್ ತಮ್ಮ ಹೆಂಡತಿ ಮತ್ತು ಸಹೋದರಿಯನ್ನು ಬಳಸಿಕೊಂಡಿದ್ದ ಕಾರಣ ಅವರನ್ನೂ ಸಹ ಬಂಧಿಸಲಾಗಿದೆ.