BengaluruCrime

ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ; ಕೊಂದಿದ್ದು ಮಾಜಿ ಕಾರು ಚಾಲಕ..?

ಬೆಂಗಳೂರು; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಪ್ರತಿಮಾ ಮರ್ಡರ್‌ ಕೇಸ್‌ ತನಿಖೆ ತೀವ್ರಗೊಂಡಿದೆ. ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇದರಲ್ಲಿ ಒಬ್ಬನನ್ನು ಅರೆಸ್ಟ್‌ ಮಾಡಲಾಗಿದೆ. ಆತ ಕೊಲೆಯಾದ ಪ್ರತಿಮಾ ಅವರ ಈ ಹಿಂದೆ ಇದ್ದ ಕಾರು ಚಾಲಕ ಎಂದು ಗೊತ್ತಾಗಿದೆ. ಆತ ಒಬ್ಬ ಮಾತ್ರ ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಹಲವು ವರ್ಷಗಳಿಂದ ಕಿರಣ್‌ ಎಂಬಾತ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದ್ರೆ ಈತನನ್ನು ಪ್ರತಿಮಾ ಅವರು ಕೆಲಸದಿಂದ ತೆಗೆದುಹಾಕಿದ್ದರು. ಈ ಕಾರಣಕ್ಕಾಗಿಯೇ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆರೋಪಿ ಕಿರಣ್‌, ಪ್ರತಿಮಾ ಅವರು ದಾಳಿಗೆ ಹೋಗುವ ಸ್ಥಳದ ಬಗ್ಗೆ ಮೊದಲೇ ಮಾಹಿತಿ ಪಡೆದು, ಸಂಬಂಧಪಟ್ಟವರಿಗೆ ಮಾಹಿತಿ ಒದಗಿಸುತ್ತಿದ್ದನಂತೆ. ಈ ವಿಚಾರ ತಿಳಿದು ಪ್ರತಿಮಾ ಅವರು ಆತನನ್ನು ಕೆಲಸದಿಂದ ತೆಗೆದಿದ್ದರು. ಆದ್ರೆ ಕಿರಣ್‌ ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳುವಂತೆ ಪ್ರತಿಮಾ ಬಳಿ ಮನವಿ ಮಾಡಿಕೊಂಡಿದ್ದನಂತೆ. ಇನ್ನೊಮ್ಮೆ ಅಂತಹ ಕೆಲಸ ಮಾಡೋದಿಲ್ಲ. ಕೆಲಸಕ್ಕೆ ತೆಗೆದುಕೊಳ್ಳಿ ಎಂದರೂ ಪ್ರತಿಮಾ ನಿರಾಕರಣೆ ಮಾಡಿದ್ದರಂತೆ. ಇದರಿಂದ ಆಕ್ರೋಶಗೊಂಡ ಆರೋಪಿ ಕಿರಣ್‌ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಪ್ರಕರಣದ ತನಿಖೆಗೆ ಪೊಲೀಸ್‌ ಇಲಾಖೆ ಆರು ಸ್ಪೆಷಲ್‌ ತಂಡಗಳನ್ನು ರಚನೆ ಮಾಡಿದೆ. ಇದರಲ್ಲಿ 60 ಜನ ಪೊಲೀಸ್‌ ಸಿಬ್ಬಂದಿ ಇದ್ದಾರೆ. 2 ಇನ್ಸ್‍ಪೆಕ್ಟರ್, 6 ಸಬ್‍ಇನ್ಸ್ ಪೆಕ್ಟರ್, 30ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಈ ಪ್ರಕರಣದ ತನಿಖೆಯಲ್ಲಿದ್ದಾರೆ.

 

Share Post