Crime

ಗುದದ್ವಾರದಲ್ಲಿ 7.3ಕೆ.ಜಿ. ಬಂಗಾರ: ಕಸ್ಟಮ್ಸ್‌ ಅಧಿಕಾರಿಗಳು ಶಾಕ್‌

 

ಹೈದರಾಬಾದ್:‌ ಅಕ್ರಮ ಚಿನ್ನ ಸಾಗಾಣಿಕೆಗಾಗಿ ಜನ ಯಾವ ಹಾದಿ ಬೇಕಾದ್ರೂ ತುಳಿಯುತ್ತಾರೆ ಅನ್ನೋದನ್ನು ಈ ಸುದ್ದಿ ನೋಡುದ್ರೆ ಗೊತ್ತಾಗುತ್ತೆ. ವಿದೇಶದಿಂದ ಹರಿದುಬರುವ ಅಕ್ರಮ ಬಂಗಾರ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ದೊರೆಯದಂತೆ ಮಾಡಲು ನಾನಾ ಕಸರತ್ತು ಮಾಡ್ತಾರೆ. ಇಂತಹ ಕೆಲವು ಸುದ್ದಿಗಳನ್ನು ನಾವು ಕೇಳಿದ್ದೇವೆ ಸಾಕ್ಸ್‌, ಮಿಕ್ಸಿ, ಮಾನವನ ದೇಹ, ಹೀಗೆ ವಿವಿಧ ರೂಪಗಳಲ್ಲಿ ಚಿನ್ನವನ್ನು ಸಾಗಿಸಲು ಪ್ರಯತ್ನಪಟ್ಟು ಅರೆಸ್ಟ್‌ ಆಗಿರುವ ಸುದ್ದಿಗಳನ್ನು ನೋಡಿದ್ದೇವೆ. ಆದರೆ ಈ ಕಿರಾತಕರು ಮಾಡಿರುವ ಕೆಲಸ ನೋಡಿ ಕಸ್ಟಮ್ಸ್‌ ಅಧಿಕಾರಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಹೈದರಾಬಾದ್‌ನ ಷಂಶಾಬಾದ್‌ ಏರ್‌ಪೋರ್ಟ್‌ನಲ್ಲಿ ನಾಲ್ವರು ಸೂಡಾನ್‌ ಪ್ರಜೆಗಳು ಅಕ್ರಮವಾಗಿ ಬಂಗಾರ ಸಾಗಿಸುತ್ತಿರುವುದು ಕಸ್ಟಮ್ಸ್‌ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ನಡೆಸಿದ ತಪಾಸಣೆ ವಿಫಲವಾಗಿದೆ. ಅವರ ಬಳಿ ಏನೂ ದೊರೆಯದೇ ಇದ್ದದ್ದು ಅಧಿಕಾರಿಗಳ ಅನುಮಾನಕ್ಕೆ ಇನ್ನಷ್ಟು ಎಡೆಮಾಡಿಕೊಟ್ಟಿದೆ. ಕೂಡಲೇ ವೇದ್ಯರನ್ನು ಕರೆಸಿ ತಪಾಸಣೆ ಮಾಡಿದಾಗ ಅಸಲಿಯತ್ತು ಆಚೆ ಬಂದಿದೆ. ಆ ನಾಲ್ವರು ತಮ್ಮ ಗುದದ್ವಾರದಲ್ಲಿ ಬರೋಬ್ಬರಿ 7.3ಚಿನ್ನವನ್ನು ಇಟ್ಟುಕೊಂಡಿದ್ದಾಗಿ ಬೆಳಕಿಗೆ ಬಂದಿದೆ. ಚಿನ್ನವನ್ನು ಕರಗಿಸಿ ದ್ರವ ರೂಪದಲ್ಲಿ ಸಾಗಿಸಲು ಪ್ರಯತ್ನಿಸಿದ್ದಾರೆ. ತಕ್ಷಣವೇ ನಾಲ್ವರನ್ನು ಅರೆಸ್ಟ್‌ ಮಾಡಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Share Post