Bengaluru

ವೇದಿಕೆಯಲ್ಲಿ ಕುಸಿದು ಬಿದ್ಧ ಐಪಿಎಲ್‌ ನಿರೂಪಕ: ಕೆಲಕಾಲ ಹರಾಜು ಪ್ರಕ್ರಿಯೆ ಸ್ಥಗಿತ

ಬೆಂಗಳೂರು:  ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಐಪಿಎಲ್‌-2022 ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಐಪಿಎಲ್‌ ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದ ನಿರೂಪಕ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಹಾಗಾಗಿ ಹರಾಜು ಪ್ರಕ್ರಿಯೆ ಕೆಲಕಾಲ ಸ್ಥಗಿತಗೊಂಡಿದೆ. ನಿರೂಪಕ ಹ್ಯೂ ಎಡ್ಮೀಸ್‌ ವನಿಂದು ಹಸರಂಗ ಬಿಡ್‌ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಹ್ಯೂ ಎಡ್ಮಿಡ್ಸ್ ಪ್ರಪಂಚದ ಪ್ರಮುಖ ಹರಾಜು ನಿರ್ವಾಹಕರಲ್ಲಿ ಒಬ್ಬರಾಗಿದ್ದು ಅವರು 2019 ರಿಂದ ಐಪಿಎಲ್ ಹರಾಜು ನಡೆಸುತ್ತಿದ್ದಾರೆ. 3 ವರ್ಷಗಳ ಹಿಂದೆ ರಿಚರ್ಡ್ ಮ್ಯಾಡ್ಲಿ ಬದಲಾಗಿ ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2018 ರಲ್ಲಿ, ಎಡ್ಮೀಡ್ಸ್ ಅವರನ್ನು ಬಿಸಿಸಿಐ 2019 ಐಪಿಎಲ್ ಹರಾಜುದಾರರನ್ನಾಗಿ ನೇಮಿಸಿತು.

Share Post