ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ!
ಅಮೆರಿಕ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಕೊಲೆ ಯತ್ನ ನಡೆದಿದೆ.. ಫ್ಲೋರಿಡಾದಲ್ಲಿ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಗೋಲ್ಡ್ ಕ್ಲಬ್ ಕೋರ್ಟ್‌ನಲ್ಲಿ ಅವರು ಗಾಲ್ಫ್ ಆಡುತ್ತಿದ್ದರು.. ಈ ವೇಳೆ ಅವರ ಹತ್ತಿರದಲ್ಲೇ ಗುಂಡಿನ ದಾಳಿ ನಡೆದಿದೆ.
ಡೊನಾಲ್ಡ್ ಟ್ರಂಪ್ ಅವರು ಗಾಲ್ಫ್ ಆಡುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದಾನೆ.. ಈ ವೇಳೆ ಕೂಡಲೇ ಕಾರ್ಯಪ್ರವೃತ್ತರಾದ ಸೀಕ್ರೇಟ್ ಸರ್ವೀಸ್ ಪೊಲೀಸರು ಡೊನಾಲ್ಡ್ ಟ್ರಂಪ್ ಅವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.. ಗುಂಡಿನ ದಾಳಿ ನಡೆಸಿ ವಾಹನವೊಂದರಲ್ಲಿ ಎಸ್ಕೇಪ್ ಆಗುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಚೇಸ್ ಮಾಡಿ ಹಿಡಿದಿದ್ದಾರೆ..
ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು 58 ವರ್ಷದ ವೆಸ್ಲಿ ರೌತ್ ಎಂದು ಗುರುತಿಸಲಾಗಿದೆ.. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಕೇಷನ್ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.. ಆರೋಪಿ ಟ್ರಂಪ್ ಗಾಲ್ಫ್ ಆಡುತ್ತಿದ್ದ ಸ್ಥಳಕ್ಕೆ ಹತ್ತಿರದಲ್ಲಿದ್ದ ಪೊದೆಯಲ್ಲಿ ಬಚ್ಚಿಟ್ಟುಕೊಂಡು AK47 ರೈಫಲ್‌ನಿಂದ ಗುಂಡಿನ ದಾಳಿ ನಡೆಸಿದ್ದ.. ಭದ್ರತಾ ಸಿಬ್ಬಂದಿ ಆರೋಪಿಯಿಂದ ರೈಫಲ್ ವಶಕ್ಕೆ ಪಡೆದಿದ್ದಾರೆ.. ಆರೋಪಿಯ ಬಳಿ ಎರಡು ಬ್ಯಾಕ್‌ಪ್ಯಾಕ್‌ಗಳು, ಗೋಪ್ರೋ ಕ್ಯಾಮರಾ ಕೂಡಾ ಇತ್ತು..
ಎರಡು ತಿಂಗಳ ಹಿಂದೆ ಕೂಡಾ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯಾ ಯತ್ನ ನಡೆದಿತ್ತು.. ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ.. ಆದ್ರೆ ಕೂದಲೆಳೆ ಅಂತರದಲ್ಲಿ ಟ್ರಂಪ್ ಪಾರಾಗಿದ್ದರು.. ಆರೋಪಿಯನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದರು..