CrimeNational

ಪತ್ನಿ ಜೊತೆ ಬಲವಂತದ ಸೆಕ್ಸ್‌; ಗಂಡನಿಗೆ ಶಿಕ್ಷೆ ವಿಧಿಸಿದ ಕೋರ್ಟ್‌!

ರಾಂಚಿ; ಪತ್ನಿ ಜೊತೆ ಬಲವಂತದ ಸೆಕ್ಸ್‌ ಮಾಡಿದ ಕಾರಣಕ್ಕೆ ಗಂಡನಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ.. ರಾಂಚಿ ಕೋರ್ಟ್‌ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.. ಆರೋಪಿ ಗಂಡನನ್ನು ಅಪರಾಧಿ ಎಂದು ಘೋಷಣೆ ಮಾಡಿರುವ ಕೋರ್ಟ್‌ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಬೇಕಿದೆ..
2015ರಲ್ಲಿ ರಣಧೀರ್‌ ಎಂಬ ವ್ಯಕ್ತಿ ತನ್ನ ಪತ್ನಿಗೆ ಇಷ್ಟವಿಲ್ಲದಿದ್ದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಸೆಕ್ಸ್‌ ಮಾಡಿದ್ದರು.. ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದರು.. ಇದರ ವಿರುದ್ಧ ಆತನ ಪತ್ನಿ ಕೋರ್ಟ್‌ ಮೊರೆ ಹೋಗಿದ್ದರು.. ಇದರ ಜೊತೆ 2016ರಲ್ಲಿ ವರದಕ್ಷಿಣೆ ಕಿರುಕುಳ ಕೇಸ್‌ ಕೂಡಾ ದಾಖಲು ಮಾಡಿದ್ದಳು.. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು.
ಸುಮಾರು 9 ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್‌ ಈಗ ಗಂಡ ಮಾಡಿದ್ದು ತಪ್ಪು ಎಂದು ತೀರ್ಪು ನೀಡಿದೆ.. ಗಂಡ ರಣಧೀರ್‌ ತಪ್ಪಿತಸ್ಥ ಎಂದು ಹೇಳಿದೆ.. ಸೆಪ್ಟೆಂಬರ್ 30 ರಂದು ರಾಂಚಿ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಲಿದೆ.

Share Post