CrimeNational

ಪತಿಯ ಗುಟ್ಕಾ ಚಟಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ!

ಉತ್ತರಪ್ರದೇಶ; ಪತಿಯ ವಿಪರೀತ ಗುಟ್ಕಾ ಸೇವನೆಯಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ದುರ್ಘಟನೆ ನಡೆದಿದೆ.. ಕರ್ವಾ ಚೌತಿಯಂದು ಮಹಿಳೆ ಉಪವಾಸದಲ್ಲಿದ್ದಳು.. ಸಂಜೆ ಪತಿಯಿಂದ ಆಶಿರ್ವಾದ ಪಡೆಯಲು ಬಂದಾಗ ಆತ ಗುಟ್ಕಾ ಜಗಿಯುತ್ತಿದ್ದ ಎಂದು ತಿಳಿದುಬಂದಿದೆ.. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ..
ಜಲಾಲ್‌ಪುರ ಗ್ರಾಮದ ಸರಿಲಾ ಪ್ರದೇಶದ ವಾಸಿ 24 ವರ್ಷದ ಸಾರಿಕಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.. ಗಂಡ ಗುಟ್ಕಾ ಜಗಿಯುತ್ತಿದ್ದರಿಂದ ಪೂಜೆ ವೇಳೆಯಲ್ಲೂ ಇದು ಬೇಕಿತ್ತಾ ಎಂದು ಜಗಳ ಮಾಡಿದ್ದಾಳೆ.. ಅನಂತರ ಮಹಿಳೆ ಎಲ್ಲಾ ಪೂಜಾ ವಿಧಾನ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಸುಲಭ್‌ ದೇವ್‌ ಎಂಬಾತ 2021ರಲ್ಲಿ ಸಾರಿಕಾಳನ್ನು ಪ್ರೀತಿಸಿ ಮದುವೆಯಾಗಿದ್ದ.. ಆದ್ರೆ ನಂತರದ ದಿನಗಳಲ್ಲಿ ಪತಿಯ ಗುಟ್ಕಾ ಚಟದಿಂದ ಪತ್ನಿ ಬೇಸತ್ತಿದ್ದಳು ಎನ್ನಲಾಗಿದೆ.. ಪೂಜೆ ದಿನವೂ ಕೂಡಾ ಇದೇ ನಡೆದಿದೆ.. ಹೀಗಾಗಿ ಇಬ್ಬರೂ ಜಗಳವಾಡಿದ್ದಾರೆ.. ಅನಂತರ ಇಬ್ಬರೂ ಊಟ ಮಾಡದೇ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ.. ಬೆಳಗ್ಗೆ ಎದ್ದು ನೋಡಿದಾಗಿ ಸಾರಿಕಾ ಫ್ಯಾನ್‌ನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ..
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಗಂಡನನ್ನೂ ವಿಚಾರಣೆಗೊಳಪಡಿಸಿದ್ದಾರೆ..

Share Post