ಮುಂಬೈ ಡ್ರಗ್ಸ್ ಕೇಸ್; ಶಾರುಖ್ ಪುತ್ರ ಆರ್ಯನ್ ಆರೋಪ ಮುಕ್ತ..!
ಮುಂಬೈ; ಐಶಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ವೇಳೆ ಬಂಧಿತನಾಗಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಮುಕ್ತನಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು, ಆರ್ಯನ್ ಖಾನ್‌ನನ್ನು ಆರೋಪ ಮುಕ್ತಗೊಳಿಸಿದ್ದಾರೆ.
ಪ್ರಕರಣ ಸಂಬಂಧ ಮುಂಬೈ ಕೋರ್ಟ್‌ನಲ್ಲಿ ಎನ್‌ಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್ಯನ್ ಖಾನ್ ಮತ್ತು ಇತರ ಐವರ ಹೆಸರುಗಳನ್ನು ಚಾರ್ಜ್‌ಶೀಟ್ ನಿಂದ ಕೈಬಿಡಲಾಗಿದೆ. ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ವಿಕ್ರಾಂತ್, ಇಶ್ಮೀತ್, ಅರ್ಬಾಜ್, ಆರ್ಯನ್, ಗೋಮಿತ್, ನೂಪುರ್, ಮೋಹಕ್ ಜೈಸ್ವಾಲ್ ಹಾಗೂ ಮುನ್ಮುನ್ ಎಂಬುವವರನ್ನು ಬಂಧಿಸಲಾಗಿತ್ತು. ಇದರಲ್ಲಿ ಆರ್ಯನ್ ಖಾನ್ ಮತ್ತು ಮೋಹಕ್ ಜೈಸ್ವಾಲ್ ಹೊರತುಪಡಿಸಿ ಉಳಿದವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
14 ಜನರ ವಿರುದ್ಧ ಭೌತಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. 6 ಜನರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಅಕ್ಟೋಬರ್ 2ರಂದು ಮುಂಬೈನ ಎನ್‌ಸಿಬಿ ವಲಯದ ಆಗಿನ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿತ್ತು. ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಆರ್ಯನ್ ಖಾನ್ ಸೇರಿ ಎಂಟು ಜನರನ್ನು ಈ ತಂಡ ಬಂಧಿಸಿತ್ತು.