ಮನೆಯಲ್ಲಿ ಮಹಾಲಕ್ಷ್ಮೀ ಕೊಲೆ ಆಗಲಿಲ್ಲವೇ..?; ಆತನೇನಾ ಆರೋಪಿ..?
ಬೆಂಗಳೂರು; ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಹತ್ಯೆಯಾದ ಮಹಾಲಕ್ಷ್ಮೀ ಹಂತಕನ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.. ಆತ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.. ಇನ್ನು, ಮಹಾಲಕ್ಷ್ಮೀಯನ್ನು ವೈಯಾಲಿಕಾವಲ್ ಮನೆಯಲ್ಲಿ ಕೊಲೆ ಮಾಡಲಿಲ್ಲವೇ..? ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಫ್ರಿಡ್ಜ್‌ನಲ್ಲಿ ಜೋಡಿಸಲಾಯಿತೇ ಎಂಬ ಅನುಮಾನ ದಟ್ಟವಾಗುತ್ತಿದೆ..
ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ನೆಲೆಸಿದ್ದದ್ದು ಸಣ್ಣ ಬಾಡಿಗೆ ಮನೆಯಲ್ಲಿ.. ಸಣ್ಣ ಗಲ್ಲಿಯಲ್ಲಿ.. ಹೀಗಾಗಿ ಆ ಮನೆಯಲ್ಲಿ ಕೊಲೆ ಮಾಡಿ, ದೇಹವನ್ನು 50ಕ್ಕೂ ಹೆಚ್ಚು ಪೀಸ್ ಮಾಡೋದು ಕಷ್ಟದ ಕೆಲಸ.. ಯಾಕಂದ್ರೆ ಒಕ್ಕದ ಮನೆಯವರಿಗೆ ಸೌಂಡ್ ಕೇಳಿಸುತ್ತಿತ್ತು.. ಇನ್ನು ವಿಧಿ ವಿಜ್ಞಾನ ತಜ್ಞರಿಗೆ ಆ ಮನೆಯಲ್ಲಿ ರಕ್ತದ ಕಲೆಯ ಗುರುತು ಕೂಡಾ ಪತ್ತೆಯಾಗಿಲ್ಲ.. ಇನ್ನು ಆ ಮನೆಯಲ್ಲಿ ಸೂಟ್‌ಕೇಸ್ ಒಂದು ಕೂಡಾ ಸಿಕ್ಕಿದೆ.. ಹೀಗಾಗಿ ಬೇರೆಲ್ಲೋ ಕೊಲೆ ಮಾಡಿ, ದೇಹವನ್ನು ಪೀಸ್ ಪೀಸ್ ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ಅದನ್ನು ತಂದು, ಮಹಾಲಕ್ಷ್ಮೀ ಮನೆಯ ಫ್ರಿಡ್ಜ್‌ನಲ್ಲಿ ಜೋಡಿಸಿರುವ ಸಾಧ್ಯತೆ ಇರಬಹುದು ಎಂದು ಶಂಕಿಸಲಾಗುತ್ತಿದೆ.. ಆದ್ರೆ ಪೊಲೀಸರು ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ..
ಮಹಾಲಕ್ಷ್ಮಿಯನ್ನು ಕೊಲೆ ಮಾಡಿ, 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ಗೆ ಇಡಲಾಗಿತ್ತು.. ಮನೆಯಲ್ಲಿ ಎಪ್‌ಎಸ್‌ಎಲ್ ತಜ್ಞರು ಎಷ್ಟು ಹುಡುಕಿದರೂ ರಕ್ತದ ಕಲೆಯಾಗಲೀ, ದೇಹ ಕತ್ತರಿಸಿದ ಪ್ರದೇಶದ ಗುರುತಾಗಲೀ ಸಿಕ್ಕಿಲ್ಲ.. ಕೊಲೆ ನಡೆದು 200 ದಿನಗಳಾದರೂ, ರಕ್ತದ ಕಲೆಗಳನ್ನು ಒರೆಸಿದ್ದರೂ ಎಫ್‌ಎಸ್‌ಎಲ್ ತಜ್ಞರು ಲುಮಿನಾಲ್ ಎಂಬ ಕೆಮಿಕಲ್ ಬಳಸಿ ರಕ್ತದ ಕಲೆಗಳನ್ನು ಕಂಡುಹಿಡಿಯುತ್ತಾರೆ.. ರಕ್ತವನ್ನು ಸ್ವಚ್ಛ ಮಾಡಿ ಒರೆಸಿದ್ದರೂ ಈ ಕೆಮಿಕಲ್‌ನಿಂದ ಕಲೆಗಳನ್ನು ಗುರುತಿಸಬಹುದು.. ಆದ್ರೆ ಇಲ್ಲಿ ಈ ಕೆಮಿಕಲ್ ಬಳಸಿದರೂ ರಕ್ತದ ಕಲೆಗಳು ಕಾಣಿಸುತ್ತಿಲ್ಲ.. ಆರೋಪಿ ಪ್ಲ್ಯಾನ್ ಮಾಡಿ ಕೊಲೆ ಮಾಡಿರಬಹುದು. ಎಲ್ಲೋ ಕೊಲೆ ಮಾಡಿ, ಇಲ್ಲಿ ತಂದು ಫ್ರಿಡ್ಜ್‌ನಲ್ಲಿ ಜೋಡಿಸಿರಬಹುದೇ ಎಂಬ ಅನುಮಾನ ಕಾಡುತ್ತಿದೆ..
ಇನ್ನೊಂದೆಡೆ ಸಾಕ್ಷ್ಯ ನಾಶಕ್ಕಾಗಿ ಆರೋಪಿ ಕೂಡಾ ಯಾವುದೋ ಕೆಮಿಕಲ್ ಬಳಸಿ ರಕ್ತದ ಕಲೆಗಳನ್ನು ಅಳಿಸಿರಬಹುದು ಎಂದು ಶಂಕೆ ಕೂಡಾ ಇದೆ.. ಇನ್ನು ಮಹಾಲಕ್ಷ್ಮೀ ಗಂಡ ಆಕೆಯ ಬಾಯ್‌ಫ್ರೆಂಡ್ ಅಶ್ರಫ್ ಈ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು.. ಆದ್ರೆ ಪೊಲೀಸರು ಅಶ್ರಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.. ಮಹಾಲಕ್ಷ್ಮೀ ಜೊತೆ ನಾನು ಸಂಪರ್ಕದಲ್ಲಿದ್ದದ್ದು ನಿಜ.. ಆದ್ರೆ ನಾನು ಯಾವ ಕಾರಣಕ್ಕೂ ಕೊಲೆ ಮಾಡಿಲ್ಲ.. ಆಕೆಯ ಮನೆಯವರ ಜಗಳ ಆದ ಮೇಲೆ ನನಗೆ ಆಕೆಯ ಸಂಪರ್ಕವೇ ಇರಲಿಲ್ಲ.. ಆರು ತಿಂಗಳ ಹಿಂದೆಯೇ ನನಗೆ ಆಕೆಯ ಸಂಪರ್ಕ ಕಡಿದುಹೋಗಿದೆ ಎಂದು ಹೇಳಿದ್ದಾನೆ.. ಪೊಲೀಸರು ಆತನ ಮೊಬೈಲ್ ಪರಿಶೀಲನೆ ಮಾಡಿದಾಗಲೂ ಆರು ತಿಂಗಳಿಂದ ಮಹಾಲಕ್ಷ್ಮೀ ಜೊತೆ ಆತ ಮಾತನಾಡಿಲ್ಲ ಅನ್ನೋದು ಗೊತ್ತಾಗಿದೆ.. ಹೀಗಾಗಿ ಈ ಕೊಲೆ ಮಾಡಿರುವುದು ಅಶ್ರಫ್ ಅಲ್ಲ ಅನ್ನೋದು ಖಾತ್ರಿಯಾಗಿದೆ.. ಹೀಗಾಗಿ ಅಶ್ರಫ್‌ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ..