ಅಪರೂಪದ ತಳಿಯ ಕೃಷ್ಣಮೃಗ ಸಾವು
ತುಮಕೂರು; ಅಪರಿಚಿತ ವಾಹನ ಡಿಕ್ಕಿಯಾಗಿ ಕೃಷ್ಣಮೃಗವೊಂದು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲ್ಲೂಕಿನ ಬಿಜವಾರ ಗ್ರಾಮದ ನಡೆದಿದೆ.
ಅಪರೂಪದ ಆಂಟಿ ಲೋಪ್ ತಳಿಯ ತಳಿಯ ಒಂದು ವರ್ಷ ಪ್ರಾಯದ ಗಂಡು ಕೃಷ್ಣ ಮೃಗ ಮೃತಪಟ್ಟಿದೆ. ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಕೃಷ್ಣ ಮೃಗದ ಕಳೆ ಬರವನ್ನ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸುಟ್ಟುಹಾಕಿದ್ದಾರೆ.