CrimeNational

12ರ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಆಟೋ ಚಾಲಕ ಸೇರಿ ಐವರ ಅರೆಸ್ಟ್‌

ಭೋಪಾಲ್; ಇತ್ತೀಚೆಗೆ 12 ವರ್ಷದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಅಂಗಲಾಚುತ್ತಾ ಮನೆಮನೆಗೂ ತಿರುಗಿದ ವಿಡಿಯೋ ಒಂದು ವೈರಲ್‌ ಆಗಿತ್ತು. 12 ವರ್ಷದ ಬಾಲಕಿ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದರು. ತೀವ್ರ ರಕ್ತಸ್ರಾವದ ನಡುವೆಯೂ ಆಕೆ, ಸುಮಾರು 8 ಕಿಲೋ ಮೀಟರ್‌ ದೂರ ನಡೆದುಬಂದಿದ್ದಳು. ಇದೀಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕ ಸೇರಿ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಉಜ್ಜಯಿನಿ ಎಸ್ಪಿ ಸಚಿನ್‌ ಶರ್ಮಾ ಮಾಹಿತಿ ಕೊಟ್ಟಿದ್ದಾರೆ.

ಬಾಲಕಿ ಸತ್ನಾದಿಂ ಉಜ್ಜೈನಿಗೆ ಬಂದಿದ್ದಾಳೆಂದು ತಿಳಿದುಬಂದಿದೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರ ಚಿಕಿತ್ಸೆ ಕೂಡಾ ನಡೆಸಲಾಗಿದೆ. ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆದ್ರೆ ಬಾಲಕಿ ಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ಹೇಳಿದ್ದಾರೆ. ಇನ್ನೊಂದೆಡೆ ಪೊಲೀಸರು ಬಾಲಕಿಯ ಪೋಷಕರನ್ನು ಗುರುತಿಸಿದ್ದಾರೆ.

 

Share Post