CrimeNational

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಅರೆಬೆತ್ತಲೆಯಾಗಿ ಓಡಿ ಜೀವ ಉಳಿಸಿಕೊಂಡ ಮಹಿಳೆ!

ಉಜ್ಜಯನಿ; ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಆ ಮಹಿಳೆ ಅರೆಬೆತ್ತಲೆಯಾಗಿಯೇ ಸುಮಾರು 1.5 ಕಿಲೋ ಮೀಟರ್‌ ಓಡಿ ಜೀವ ಉಳಿಸಿಕೊಂಡಿದ್ದಾರೆ.. ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ.. ಉಜ್ಜಿಯಿನಿಯಿಂದ ಸುಮಾರು 20 ಕಿಲೋ ಮೀಟರ್‌ ದೂರದಲ್ಲಿರುವ ತಾಜ್‌ಪುರಕ್ಕೆ ಮಹಿಳೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.. ಆಕೆ ತಪ್ಪಿಸಿಕೊಂಡು ಓಡಿಬಂದಿದ್ದಾಳೆ..

ಮಹಿಳೆ ಅರೆನಗ್ನವಾಗಿ ಓಡಿಬರುತ್ತಿರುವುದನ್ನು ನೋಡಿದ ಸಾರ್ವಜನಿಕರು ಪನ್ವಾಸ ಪೊಲೀಸ್‌ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ.. ಪೊಲೀಸರು ಮಹಿಳೆಯನ್ನು ರಕ್ಷಿಸಿ, ವಿಚಾರಣೆ ಮಾಡಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ.. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ..

ಜಬಲ್ಪುರ ಮತ್ತು ಮಾಂಡ್ಲಾದ ಇಬ್ಬರು ಪ್ರೇಮಿಗಳು ಉಜ್ಜಯಿನಿಗೆ ಓಡಿಬಂದಿದ್ದರು.. ಆದ್ರೆ ಉಳಿಯಲು ಮನೆ ಹಾಗೂ ಮಾಡೋಕೆ ಕೆಲಸ ಇರಲಿಲ್ಲ.. ಇಬ್ಬರೂ ಕೆಲಸ ಹುಡುತ್ತಿದ್ದಾಗ ರವಿ ಎಂಬ ಹುಡುಗನ ಪರಿಚಯವಾಗಿದೆ.. ಆತ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ತಾಜ್‌ಪುರಕ್ಕೆ ಕರೆದೊಯ್ದಿದ್ದಾನೆ.. ಅಲ್ಲಿ ಗುಡಿಸಿಲೊಂದರಲ್ಲಿ ಇಬ್ಬರನ್ನೂ ಇರಿಸಲಾಗಿದೆ.. ನಂತರ ಮಹಿಳೆಯ ಪ್ರಿಯಕರನನ್ನು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಹೊರಗೆ ಕಳುಹಿಸಲಾಗಿದೆ..

ಇದೇ ವೇಳೆ ಆರೋಪಿ ರವಿ ತನ್ನ ಇನ್ನೊಬ್ಬ ಸ್ನೇಹಿತ ಇಮ್ರಾನ್‌ ಎಂಬಾತನನ್ನು ಗುಡಿಸಲಿಗೆ ಕರೆಸಿಕೊಂಡಿದ್ದಾನೆ..ಇಬ್ಬರೂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.. ಈ ವೇಳೆ ಏನೇನೋ ಮಾಡಿ ಮಹಿಳೆ ತಪ್ಪಿಸಿಕೊಂಡು ಅರೆನಗ್ನ ಸ್ಥಿತಿಯಲ್ಲೇ ಓಡಿಬಂದಿದ್ದಾಳೆ ಎಂದು ತಿಳಿದುಬಂದಿದೆ.. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಈಕೆಯ ಸಹಾಯಕ್ಕೆ ಬಂದಿದ್ದಾರೆ..

 

Share Post