BengaluruCrime

ಕಾಲೇಜಿನ ಲೇಡೀಸ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ!; ವಿದ್ಯಾರ್ಥಿ ಮೊಬೈಲ್‌ನಲ್ಲಿ 8 ಸಾವಿರ ವಿಡಿಯೋ!

ಬೆಂಗಳೂರು; ಆಂಧ್ರಪ್ರದೇಶದ ಕಾಲೇಜೊಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಿಸಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ಇದೀಗ ಬೆಂಗಳೂರಿನ ಸರದಿ.. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲೂ ಇಂತಹದ್ದೇ ಒಂದು ಕೃತ್ಯ ನಡೆದಿದೆ.. ಈ ಸಂಬಂಧ ಪೊಲೀಸರು ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ..
ಮೈಸೂರು ರಸ್ತೆಯಲ್ಲಿ ಬರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.. ಕದ್ದು ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಹೋಗುತ್ತಿದ್ದ ಆರೋಪಿ, ಕ್ಯಾಮರಾ ಇಟ್ಟು ಚಿತ್ರೀಕರಣ ಮಾಡುತ್ತಿದ್ದ.. ಅದೇ ರೀತಿ ನಿನ್ನೆ ಕೂಡಾ ಕ್ಯಾಮರಾ ಫಿಕ್ಸ್‌ ಮಾಡಲು ಹೋಗಿದ್ದಾನೆ.. ಈ ವೇಳೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.. ಬಂಧಿತ ಆರೋಪಿಯನ್ನು ವಿಶಾಲ್‌ ಎಂದು ಗುರುತಿಸಲಾಗಿದೆ.. ಈತ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆಗಾಗ ಲೇಡೀಸ್‌ ಟಾಯ್ಲೆಟ್‌ನಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಿಸುತ್ತಿದ್ದ ಎಂದು ತಿಳಿದುಬಂದಿದೆ..
ನಿನ್ನೆ‌ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಶಾಲ್ ಕ್ಯಾಮಾರಾ ಫಿಕ್ಸ್‌ ಮಾಡುತ್ತಿದ್ದ.. ಇದೇ ವೇಳೆ ಅಲ್ಲಿಗೆ ವಿದ್ಯಾರ್ಥಿನಿಯೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ.. ಆ ದೃಶ್ಯ ನೋಡಿ ಆಕೆ ಗಾಬರಿಗೊಂಡು ಅಲ್ಲಿಂದ ಓಡಿ ಬಂದಿದ್ದಾಳೆ.. ಇತರೆ ವಿದ್ಯಾರ್ಥಿಗಳಿಗೆ ಸುದ್ದಿ ಮುಟ್ಟಿಸಿದ್ದಾಳೆ.. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.. ಇದೇ ವೇಳೆ ವಿದ್ಯಾರ್ಥಿಗಳು ಪ್ರತಿಭಟನೆ ಕೂಡಾ ಮಾಡಿದ್ದಾರೆ.. ಇನ್ನು ಬಂಧಿತ ಆರೋಪಿಯ ಮೊಬೈಲ್‌ನಲ್ಲಿ 8 ಸಾವಿರಕ್ಕೂ ಅಧಿಕ ವಿಡಿಯೋಗಳಿರುವುದು ಪತ್ತೆಯಾಗಿದೆ..

Share Post