CrimeNational

ಪಾಕ್‌ಗೆ ಸೇರಿದ ಡ್ರೋನ್‌ ಉರುಳಿಸಿದ ಸೇನೆ

ಗುರುದಾಸ್‌ಪುರ; ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಒಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಪಾಕಿಸ್ತಾನದಿಂದ ಭಾರತದೊಳಕ್ಕೆ ಈ ಡ್ರೋನ್‌ ಪ್ರವೇಶ ಮಾಡಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿ ಅದು ಕಾಣಿಸಿದ್ದು ಕೂಡಲೇ ಅದನ್ನು ಹೊಡೆದುರುಳಿಸಲಾಗಿದೆ.

ಇಂದು ಬೆಳಗಿನ ಜಾವ 4.35ರ ಸುಮಾರಿಗೆ ಈ ಘಟನೆ ನಡೆದಿದೆ. ಡ್ರೋನ್‌ ಉರುಳಿದ ಜಾಗದಲ್ಲಿ ಬಿಎಸ್‌ಎಫ್ ಡಿಐಜಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು, ಈ ಡ್ರೋನ್‌ನಲ್ಲಿ ಪಾಕ್‌ನಿಂದ ಡ್ರಗ್ಸ್‌ ಸಾಗಿಸಲಾಗುತ್ತಿತ್ತೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ಪಾಕ್‌ನಿಂದ 191 ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post