BengaluruCrime

ಬೆಂಗಳೂರಿನ ಮತ್ತೊಂದು ಹೋಟೆಲ್‌ಗೆ ಬಾಂಬ್‌ ಬೆದರಿಕೆ!

ಬೆಂಗಳೂರು; ಬೆಂಗಳೂರಿನಲ್ಲಿ ಪ್ರತಿಷ್ಠಿತ ಹೋಟೆಲ್‌ ಒಂದಕ್ಕೆ ಬಾಂಬ್‌ ಬೆದರಿಕೆ ಬಂದಿದೆ.. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಹೋಟೆಲ್‌ ಒಟೆರಾಗೆ ಈ ಬೆದರಿಕೆ ಬಂದಿದೆ.. ಇ-ಮೇಲ್‌ ಮಾಡಿರುವ ದುಷ್ಕರ್ಮಿಗಳು ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ.. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.. ಬಾಂಬ್‌ ನಿಷ್ಕ್ರಿಯದಳ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ..
ಇಂದು ಮಧ್ಯಾಹ್ನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಇ ಮೇಲ್‌ ಬಂದಿತ್ತು.. ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್‌ ಪತ್ತೆಯಾಗಿರಲಿಲ್ಲ.. ಇದು ಹುಸಿ ಅನ್ನೋದು ಗೊತ್ತಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಒಟೆರಾ ಹೋಟೆಲ್‌ಗೆ ಬೆದರಿಕೆ ಕರೆ ಬಂದಿದೆ..

Share Post