Bengaluru

ದೇವಸ್ಥಾನಗಳಲ್ಲಿ ಗಂಟೆ ನಾದಕ್ಕೆ ʻಲಾಕ್‌ʼ ಹಾಕಿದ ಸರ್ಕಾರ..!

ಬೆಂಗಳೂರು: ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸುವ ಗಂಟೆ, ಜಾಗಟೆ, ಧ್ವನಿವರ್ದಕಗಳನ್ನು ಬಳಸದಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್‌ ಜಾರಿ ಮಾಡಿದೆ. ದೇವಸ್ಥಾನಗಳಲ್ಲಿ ಮಂಗಳಾರತಿ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಗಂಟೆ ಶಬ್ದ ಮಾಡಲಾಗುತ್ತಿದೆ. ಜೊತೆಗೆ ಡಮರುಗ ಸೇರಿದಂತೆ ಇನ್ನಿತರ ಸಾಧನಗಳ ಮೂಲಕ ಶಬ್ದ ಹೊರಡಿಸಲಾಗುತ್ತಿದೆ. ಆದ್ರೆ ನಿಗದಿತ ಡೆಸಿಬಲ್‌ಗಿಂತ ಕಡಿಮೆ ಡೆಸಿಬಲ್‌ ಶಬ್ದ ಮಾಡುವ ಸಾಧನಗಳನ್ನು ಮಾತ್ರ ಬಳಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕಲಾಸಿಪಾಳ್ಯಂ ನಲ್ಲಿರುವ ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಮಲ್ಲಿಕಾರ್ಜುನ  ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ಈ ನೋಟಿಸ್‌ ಕಳುಹಿಸಲಾಗಿದೆ.

ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯವಿದ್ದರೆ ಅದನ್ನು ಶಬ್ಧ ರಹಿತ ವಲಯ ಎಂದು ಘೋಷಿಸಲಾಗುತ್ತದೆ.  ಈ ಪ್ರದೇಶದ ನೂರು ಮೀಟರ್​ಗಳ ಅಂತರದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಮಾಡುವಂತಿಲ್ಲ. ಇದು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಲಾಗಿದೆ.

Share Post