ಗೃಹಜ್ಯೋತಿ ಯೋಜನೆ; ಶೇ.10ರಷ್ಟು ಬದಲು 10 ಯೂನಿಟ್ ಹೆಚ್ಚವರಿ ನೀಡಲು ತೀರ್ಮಾನ
ಬೆಂಗಳೂರು; ಗೃಹಜ್ಯೋತಿ ಯೋಜನೆ ಜಾರಿಗೆ ತಂದ ಆರು ತಿಂಗಳಲ್ಲೇ ರಾಜ್ಯ ಸರ್ಕಾರ, ಯೋಜನೆಯಲ್ಲಿ ಬದಲಾವಣೆ ತಂದಿದೆ. ಈ ಹಿಂದೆ ಯೋಜನೆ ಜಾರಿಗೂ ಮೊದಲು ಒಂದು ವರ್ಷದ ಅವಧಿಯಲ್ಲಿ ಬಳಸಿದ ವಿದ್ಯುತ್ ನ ಸರಾಸರಿ ಯೂನಿಟ್ ಹಾಗೂ ಅದಕ್ಕಿಂತ ಹೆತ್ತು ಪರ್ಸೆಂಟ್ ಹೆಚ್ಚು ಬಳಸಿದರೂ ಉಚಿತ ಎಂದು ಹೇಳಲಾಗಿತ್ತು. ಆದ್ರೆ ಈಗ ಹತ್ತು ಪರ್ಸೆಂಟ್ ಬದಲಿಗೆ ಹತ್ತು ಯೂನಿಟ್ ಜಾಸ್ತಿ ನೀಡಲು ನಿರ್ಧರಿಸಲಾಗಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ. ಇನ್ಮೇಲೆ 10 ಪರ್ಸೆಂಟ್ ಹೆಚ್ಚುವರಿ ಬದಲು 10 ಯೂನಿಟ್ ಪ್ರತಿ ತಿಂಗಳು ಹೆಚ್ಚಿಗೆ ಸಿಗಲಿದೆ. ಇತ್ತ ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ.