BengaluruCrime

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್‌!

ಬೆಂಗಳೂರು; ಬೆಂಗಳೂರಿನಲ್ಲಿ ಆಗಾಗ ಬಿಎಂಟಿಸಿ ಬಸ್‌ಗಳಿಗೆ ಬೆಂಕಿ ತಗಲುವ ದೃಶ್ಯಗಳು ಕಂಡುಬರುತ್ತಿರುತ್ತವೆ.. ಅದೇ ರೀತಿ ಇವತ್ತು ಬೆಳ್ಳಂಬೆಳಗ್ಗೆಯೇ ಬಿಎಂಟಿಸಿ ಬಸ್ಸೊಂದು ಬೆಂಕಿಗೆ ಆಹುತಿಯಾಗಿದೆ..

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಬಿದ್ದಿದೆ.. ನೋಡನೋಡುತ್ತಿದ್ದಂತೆ ಇಡೀ ಬಸ್‌ ಗೆ ಬೆಂಕಿ ವ್ಯಾಪಿಸಿದೆ.. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ಸನ್ನು ನಿಲ್ಲಿಸಿದ ಚಾಲಕ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ.. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ..

ಅನಿಲ್‌ಕುಂಬ್ಳೆ ಜಂಕ್ಷನ್‌ ಬಳಿ ಈ ದುರ್ಗಟನೆ ನಡೆದಿದೆ.. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಬಸ್‌ ಬಹುತೇಕ ಸುಟ್ಟು ಕರಕಲಾಗಿದೆ..

 

Share Post