Bengaluru

ನಾಳೆ ಸಾರ್ವಜನಿಕರೊಂದಿಗೆ ಕಮಲ್‌ ಪಂತ್‌ ಟ್ವಿಟರ್‌ನಲ್ಲಿ ಸಂವಾದ

ಬೆಂಗಳೂರು : ಪೊಲೀಸ್‌ ಆಯುಕ್ತರಾಗಿರುವ ಕಮಲ್‌ ಪಂತ್‌ ಅವರು ನಾಳೆ ಬೆಳಗ್ಗೆ 11ರಿಂದ 12ರವರೆಗೆ ಟ್ವಿಟರ್‌ನಲ್ಲಿ ಲೈವ್‌ ಮಾಡಲಿದ್ದಾರೆ. #askcpblr ಎಂಬ ಹ್ಯಾಶ್‌ ಟ್ಯಾಗ್‌ ಜೊತೆಗೆ ಕಮಲ್‌ ಪಂತ್‌ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು, ಅಹವಾಲುಗಳಿಗೆ ಲೈವ್‌ನಲ್ಲಿಯೇ ಉತ್ತರ ಕಂಡುಕೊಳ್ಳಬಹುದಾಗಿದೆ. ಫೆಬ್ರುವರಿ 19ಕ್ಕೆ ಭೇಟಿಯಾಗೋಣ ಎಂದು ಟ್ವೀಟ್‌ ಮಾಡಿರುವ ಕಮಲ್‌ ಪಂತ್‌ ಈ ಮುಂಚೆ ಯಾವ ಪೊಲೀಸ್‌ ಆಯುಕ್ತರು ಮಾಡದ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾಕಷ್ಟು ಪ್ರಶಂಸೆ ಸಿಕ್ಕಿದೆ.

ನೀವು ನಿಮ್ಮ ಸವಾಲುಗಳನ್ನು #askcpblr ಎನ್ನುವ ಹ್ಯಾಶ್‌ ಟ್ಯಾಗ್‌ ಬಳಸಿ ಕೇಳಬಹುದಾಗಿದೆ. ಟ್ವಿಟರ್‌ ಲೈವ್‌ ಸೆಶೆನ್‌ನಲ್ಲಿ ಪೊಲೀಸ್‌ ಆಯುಕ್ತರೊಂದಿಗೆ ವರ್ಚುವಲ್‌ ಚರ್ಚೆ ನಡೆಸಬಹುದಾಗಿದೆ.

Share Post