CrimeHealth

BHOPAL FIRE; ಪಟಾಕಿ ಕಾರ್ಖಾನೆ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆ!

ಭೋಪಾಲ್‌; ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಭೈರಾಗರ್ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ಇದರಲ್ಲಿ ಸಾವನ್ನಪ್ಪಿದವರು ಸಂಖ್ಯೆ 11ಕ್ಕೇರಿದೆ. ಇನ್ನೂ 50 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಅವರನ್ನುವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತದೆ. 

ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಅಕ್ಕಮಕ್ಕದ ಮನೆಗಳಿಗೆ ಕೂಡಾ ಹಾನಿಯಾಗಿದೆ. ಹಲವಾರು ಮಂದಿ ಜೀವ ಉಳಿಸಿಕೊಳ್ಳಲು ಸ್ಥಳದಿಂದ ದೂರಕ್ಕೆ ಓಡಿದ ದೃಶ್ಯಗಳು ಕೂಡಾ ಕಂಡುಬಂದಿದೆ. ಏನಾಗ್ತಿದೆ ಎಂದು ನೋಡಿವಷ್ಟರಲ್ಲೇ ಹಲವರ ಪ್ರಾಣಗಳು ಹಾರಿಹೋಗಿವೆ. ಇನ್ನೂ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಟಾಕಿ ಕಾರ್ಖಾನೆ ಅನಧಿಕೃತವಾದ್ದು ಎಂದು ಹೇಳಲಾಗುತ್ತಿದೆ. ಈ ಫ್ಯಾಕ್ಟರಿ ನಡೆಸೋದಕ್ಕೆ ಯಾವುದೇ ಲೈಸೆನ್ಸ್‌ ತೆಗೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಸ್ಫೋಟದ ತೀವ್ರತೆಗೆ ಸುಮಾರು 15 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಭೂಮಿ ನಡುಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

Share Post