Crime

ಲೂದಿಯಾನಾ ಕೋರ್ಟ್‌ ಬ್ಲಾಸ್ಟ್‌ ಪ್ರಕರಣ; ಸ್ಥಳಕ್ಕೆ CRPF ಕಮಾಂಡೆಂಟ್‌ ಧೀರೇಂದ್ರ ವರ್ಮಾ ಭೇಟಿ

ಲೂದಿಯಾನಾ: ಲೂದಿಯಾನಾ ಕೋರ್ಟ್‌ ಬ್ಲಾಸ್ಟ್‌ ಘಟನಾ ಸ್ಥಳಕ್ಕೆ ಸಿಆರ್ ಪಿಎಫ್ ಕಮಾಂಡೆಂಟ್ ಧೀರೇಂದ್ರ ವರ್ಮಾ ಹಾಗೂ ಜಮ್ಮು-ಕಾಶ್ಮೀರದ ತಜ್ಞರ ತಂಡ ಭೇಟಿ ನೀಡಿದೆ. ಧೀರೇಂದ್ರ ವರ್ಮಾ ಅವರು nstitute of IED Management of the forceನ ಹೆಡ್‌ ಆಗಿದ್ದಾರೆ. ಇವರಿಗೆ ಘಟನೆಯ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರ ತಂಡದೊಂದಿಗೆ ಆಗಮಿಸಿದ ಅವರು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಬಿದ್ದಿದ್ದ ವಸ್ತುಗಳನ್ನು ಅವರು ಪರಿಶೀಲನೆ ನಡೆಸಿದ್ದಾರೆ.

ಸ್ಫೋಟಕ್ಕೆ ಯಾವ ವಸ್ತುಗಳನ್ನು ಬಳಸಿದ್ದಾರೆ..? ಸ್ಫೋಟದ ತೀವ್ರತೆ ಎಷ್ಟು..? ಈ ಹಿಂದೆ ಇಂತಹ ಸ್ಫೋಟಗಳು ಎಲ್ಲೆಲ್ಲಿ ನಡೆದಿದ್ದವು..? ಆ ಸ್ಫೋಟಗಳನ್ನು ನಡೆಸಿದ್ದು ಯಾರು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ನಿನ್ನೆ ಪಂಜಾನ್‌ನ ಲೂದಿಯಾನಾ ಜಿಲ್ಲಾ ನ್ಯಾಯಾಲಯ ಕಾಂಪ್ಲೆಕ್ಸ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಕೋರ್ಟ್‌ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯ ಬಾತ್‌ ರೂಮ್‌ನಲ್ಲಿ ಈ ದುರ್ಘಟನೆ ನಡೆದಿತ್ತು.  ದುಷ್ಕರ್ಮಿಗಳು ಐಇಡಿ ಸ್ಫೋಟಿಸಿದ್ದರಿಂದ ದುರಂತ ಸಂಭವಿಸಿತ್ತು.

Share Post