National

ಸಂಕ್ರಾಂತಿ ವೇಳೆಗೆ ಆಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ

ಬೆಂಗಳೂರು; ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗಿದೆ. ಮೊದಲ ಹಂತದ ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಜನವರಿ 2024ರ ಸಂಕ್ರಾಂತಿ ವೇಳೆಗೆ  ಬಾಲ ರಾಮನ ಪ್ರತಿಷ್ಠಾಪನೆಯಾಗಲಿದೆ. ಈ ಬಗ್ಗೆ ರಾಮ ಮಂದಿರ ನಿರ್ಮಾಣ ಸಮಿತಿ ಸದಸ್ಯ ಗೋಪಾಲ್ ಜೀ ತಿಳಿಸಿದ್ದಾರೆ.

ರಾಮ ಮಂದಿರಕ್ಕೆ ಬುನಾದಿ ಹಾಕುವ ಕೆಲಸ ಸಂಪೂರ್ಣ ಮುಗಿದಿದೆ. ಭೂಮಿಯ 45 ಅಡಿ ಆಳದಲ್ಲಿ  ಸಿಮೆಂಟ್ ಕಾಂಕ್ರೀಟ್ ಕೆಲಸ ಆಗಿದೆ. ಈಗ ಅದರ‌‌ ಮೇಲೆ ಬೆಂಗಳೂರಿನ 1700 ಗ್ರಾನೈಟ್ ಕಲ್ಲು ಇಡುವ ಕಾರ್ಯ ಬಹುತೇಕ ಮುಗಿದಿದೆ. 2024 ಜನವರಿ ಸಂಕ್ರಾಂತಿಯ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇಂದಿನಿಂದ 2 ವರ್ಷಗಳ ಒಳಗೆ ರಾಮಮಂದಿರ ಕೆಲಸ ಸಂಪೂರ್ಣವಾಗಲಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಸದಸ್ಯರು ತಿಳಿಸಿದ್ದಾರೆ.

Share Post