ಅತ್ಯಾಚಾರವೆಸಗಿ ಮಹಿಳೆ ಮರ್ಮಾಂಗಕ್ಕೆ ಗನ್ ತುರುಕಿದ ಕಾಮುಕ ರಾಜಕಾರಣಿ!
ಪಶ್ಚಿಮ ಬಂಗಾಳ; ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದೇ ಅಲ್ಲದೆ, ಮರ್ಮಾಂಗಕ್ಕೆ ಗನ್ ತುರುಕಿ ಚಿತ್ರಹಿಂಸೆ ನೀಡಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆ ಬೋಲ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.. ಅತ್ಯಾಚಾರ ಎಸಗಿದವನು ಟಿಎಂಸಿ ಕಾರ್ಯಕರ್ತನಾಗಿದ್ದರಿಂದ ಮಹಿಳೆ ಭಯಬಿದ್ದು ಯಾರಿಗೂ ಹೇಳಿರಲಿಲ್ಲ ಎನ್ನಲಾಗಿದೆ.. ಇದೀಗ ಆಕೆ ಗಂಡ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾನೆ.. ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ ಫಿರೋಜ್ ಖಾನ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ನಾನು ಅಂತಹ ಕೆಲಸ ಮಾಡಿಲ್ಲ; ಲೈವ್‌ನಲ್ಲೇ ಕಣ್ಣೀರು ಹಾಕಿದ ಬರ್ರೆಲಕ್ಕ!
ಪಂಚಚೋವಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕರೀಂಪುರದ ನಿವಾಸಿಯಾಗಿರುವ ಫಿರೋಜ್ ಖಾನ್, ವಿವಾಹಿತ ಮಹಿಳೆಯೊಬ್ಬರಿಗೆ ಗನ್ ತೋರಿಸಿ ದನದ ಕೊಟ್ಟಿಗೆಗೆ ಎಳೆದೊಯ್ದು ಕೈಕಾಲು ಕಟ್ಟಿ ಅತ್ಯಾಚಾರ ಎಸಗಿದ್ದ.. ಜೊತೆಗೆ ಆಕೆಗೆ ಮರ್ಮಾಂಗಕ್ಕೆ ಗನ್ ತೂರಿಸಿ ವಿಕೃತ ಆನಂದಪಟ್ಟಿದ್ದ ಎಂದು ಆರೋಪಿಸಲಾಗಿದೆ.. ಈ ಸಮಯದಲ್ಲಿ ಆರೋಪಿ ಸಂತ್ರಸ್ತೆಯ ಫೋಟೋಗಳನ್ನು ಸಹಾ ತೆಗೆದಿದ್ದಾನೆ ಎಂದು ತಿಳಿದುಬಂದಿದೆ.. ಮಹಿಳೆಯ ನಾಲ್ಕು ವರ್ಷದ ಮಗ ಹಾಗೂ ಮಹಿಳೆಯ ತಾಯಿ ಹುಡುಕುತ್ತಾ ಬಂದಾಗ ಆಕೆ ದನದ ಕೊಟ್ಟಿಗೆಯಲ್ಲಿ ನೋಡಬಾರದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ..
ಇದನ್ನೂ ಓದಿ; ಇದ್ದಕ್ಕಿದ್ದಂತೆ ಮಿನಿ ವಿಮಾನ ಪತನ; ಏಳು ಮಂದಿ ದುರ್ಮರಣ!
ಮೊದಲ ಸಾಲವಾಗಿ ಹಣ ನೀಡಿದ ಆರೋಪಿ, ಅದಕ್ಕಾಗಿ ನನ್ನ ಜೊತೆ ಮಲಗು ಎಂದು ಆತ ಬಲವಂತ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಮಹಿಳೆ ಮೊದಲಿಗೆ ದೂರು ನೀಡಿರಲಿಲ್ಲ.. ಇದೀಗ ಮಹಿಳೆ ಗಂಡನೇ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ.. ಇದೀಗ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..