CrimeDistricts

ಗೋವಾದಿಂದ ವಾಪಸ್‌ ಬರುವಾಗ ಅಪಘಾತ; ಮಗು ಸೇರಿ ಮೂವರ ದುರ್ಮರಣ

ಚಿತ್ರದುರ್ಗ; ಗೋವಾಗೆ ಹೋಗಿ ವಾಪಸ್‌ ಬರುತ್ತಿದ್ಧಾಗ ಅಪಘಾತವಾಗಿ ಬೆಂಗಳೂರಿನ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ವಿಜಯಪುರ ಗೊಲ್ಲರಹಟ್ಟಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೂರು ತಿಂಗಳ ಮಗು ಹಾಗೂ ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿ ಗೋವಾಗೆ ಹೋಗಿ ವಾಪಸ್ಸಾಗುತ್ತಿದ್ದರು. ಈ ವೇಳೆ ಲಾರಿ ಹಾಗೂ ಕಾರು ಡಿಕ್ಕಿಯಾಗಿವೆ.  ಮೂರು ತಿಂಗಳ ಮಗು ಫಾತಿಮಾ, ತಾಯಿ ತಬುಸಮ್ ಹಾಗೂ ಸಂಬಂಧಿ ಜಾಕೀರ್ ಅಹ್ಮದ್ ‌ ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ. ನಯಾಜ್, ಇಮ್ರಾನ್ ಖಾನ್, ತಬ್ರೀಜ್ ಅಹಮ್ಮದ್, ಸಬಾ ಎಂಬುವವರು ಗಾಯಗೊಂಡಿದ್ದು, ಚಿತ್ರದುರ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Share Post