CrimeDistricts

ಟ್ಯೂಷನ್‌ಗೆ ಹೋಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!

ಮಂಡ್ಯ; ಟ್ಯೂಷನ್‌ಗೆ ತೆರಳಿದ್ದ ಹತ್ತು ವರ್ಷದ ವಿದ್ಯಾರ್ಥಿನಿ ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಈ ಘಟನೆ ನಡೆದಿದೆ.

   ನಿನ್ನೆ ಬೆಳಗ್ಗೆ ಹತ್ತು ವರ್ಷದ ಬಾಲಕಿ ಟ್ಯೂಷನ್‌ಗೆಂದು ಹೋಗಿದ್ದಳು. ಆದ್ರೆ ಎಷ್ಟು ಹೊತ್ತಾದರೂ ವಾಪಸಗಗ ಬಂದಿಲ್ಲ. ಟ್ಯೂಷನ್‌ ಸೆಂಟರ್‌ ಹಾಗೂ ಸುತ್ತಮುತ್ತ ವಿಚಾರಿಸಿದಾಗ ಬಾಲಕಿ ಎಲ್ಲಿಯೂ ಪತ್ತೆಯಾಗಿಲ್ಲ. ಕೊನೆಗೆ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಸಂಪ್‌ ನಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

  ವಿದ್ಯಾರ್ಥಿನಿಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಸ್ಥಳಕ್ಕೆ ಡಿವೈಎಸ್​ಪಿ ಎನ್.ನವೀನ್‌ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Post